ಯಾದಗಿರಿ: ಸೋತು ಯಡಿಯೂರಪ್ಪನವರ ಆಶೀರ್ವಾದದಿಂದ ಸಚಿವರಾದವರು ನಡೆಸಿದ ಹುನ್ನಾರದಿಂದ ಸಿಎಂ ಮನನೊಂದು ರಾಜೀನಾಮೆ ಮಾತುಗಳನ್ನಾಡಿದ್ದಾರೆ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಮುಂದಿನ ಎರಡು ವರ್ಷ ಸಿಎಂ ಯಡಿಯೂರಪ್ಪ ಅಂತ ಈಗಾಗಲೇ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಮತ್ತು ಅನಂತಕುಮಾರ್ ಪರಿಶ್ರಮ ಸಾಕಷ್ಟಿದೆ. ಜನರಿಂದ ಆಯ್ಕೆದ ಪಕ್ಷದ ಎಲ್ಲಾ ಶಾಸಕರ ಬೆಂಬಲ ನಿಮಗಿದೆ ಎಂದು ಪರೋಕ್ಷವಾಗಿ ಸಚಿವರ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಸರ್ ನಿಮ್ಮ ಹೋರಾಟದ ಹಾದಿ ಬಗ್ಗೆ ನಿಮ್ಮ ರಾಜಕೀಯ ಜೀವನದ ಬಗ್ಗೆ ರಾಜ್ಯದ ಜನತೆ ಗೊತ್ತು. ನಿಮ್ಮ ಹೇಳಿಕೆಯಿಂದ ಲಕ್ಷಾಂತರ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ. ನಿಮ್ಮ ಜೊತೆಗೆ ಸಂಘ ಪರಿವಾರ, ಪಕ್ಷ ಜನರು ಇದ್ದಾರೆ ಅಂತ ತಮ್ಮ ಬೆಂಬಲ ನೀಡಿದ್ದಾರೆ ಎಂದರು. ಇದನ್ನೂ ಓದಿ:ಎಲ್ಲಿಯವರೆಗೆ ಹೈಕಮಾಂಡ್‍ಗೆ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ – ಬಿಎಸ್‍ವೈ

ಸಿಎಂ ಹೇಳಿದ್ದೇನು?: ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಹೋಗುವುದಿಲ್ಲ. ಬಿಜೆಪಿಗೆ ಪರ್ಯಾಯದ ವ್ಯಕ್ತಿ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ ದೇಶದಲ್ಲಿ ಪರ್ಯಾಯ ನಾಯಕರು ಇದ್ದಾರೆ. ಕರ್ನಾಟಕದಲ್ಲೂ ಪರ್ಯಾಯ ವ್ಯಕ್ತಿಗಳು ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಹೈಕಮಾಂಡ್ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಕಮಲ ಕ್ರಾಂತಿಯ ಮುನ್ಸೂಚನೆ ನೀಡಿದೆಯಾ ಬಿಜೆಪಿ ಹೈಕಮಾಂಡ್?
ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜಕಾರಣಿಗಳಲ್ಲಿ ಬಹಳ ತಂತ್ರ ಇರುತ್ತದೆ. ರಾಜಕಾರಣದಲ್ಲಿ ಒಂದು ನೀತಿ ಇದೆ. ಹೇಳೋದೊಂದು ಮಾಡೊದೊಂದು ಇರುತ್ತದೆ. ರಾಜಕಾರಣದಲ್ಲಿ ಯಡಿಯೂರಪ್ಪನವರ ತಂತ್ರ ಬೇರೆ. ಯಡಿಯೂರಪ್ಪ ಇರೋದರಲ್ಲಿ ಗಟ್ಟಿ ಮನುಷ್ಯ. ಅವರ ನಾಯಕತ್ವದಲ್ಲಿ 104 ಸೀಟ್ ಬಂದಿದೆ. ಅವರ ನಾಯಕತ್ವದಡಿಯಲ್ಲಿ ನಮ್ಮ ಸ್ನೇಹಿತರು ಅಲ್ಲಿಗೆ ಹೋದರು. ಈಗ ಸುಮ್ಮನೆ ಅವರನ್ನು ತಗೆದು ಹಾಕುವ ಮಾತು ಅವರ ಪಾರ್ಟಿಗೆ ಬಿಟ್ಟಿದ್ದು ಎಂದಿದ್ದರು. ಇದನ್ನೂ ಓದಿ: ಸಿಎಂ ಬಿಎಸ್‍ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?

Leave a Reply