ಸಿಎಂ ಬಿಎಸ್‌ವೈಗೆ ಕೊರೊನಾ – ಸಂಪುಟಕ್ಕೆ ಕ್ವಾರಂಟೈನ್?

 ಬೆಂಗಳೂರು: ಸಿಎಂ ಯಡಿಯೂರಪ್ಪಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಸಂಪುಟಕ್ಕೇನೇ ಕ್ವಾರಂಟೈನ್ ಆಗುವ ಸಂಕಷ್ಟ ಎದುರಾಗಿದೆ.

ಇವತ್ತು ಸೋಂಕು ದೃಢಪಡುವ ಮುನ್ನ ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದರು. ಬೆಳಗ್ಗೆ ಸರ್ಕಾರಿ ನಿವಾಸ ಕೃಷ್ಣದಲ್ಲೂ ಅಧಿಕಾರಿಗಳೊಂದಿಗೂ ಸಭೆ ನಡೆಸಿದ್ದರು.

ಸಿಎಂಗೆ ಸೋಂಕು ದೃಢಪಟ್ಟ ಬೆನ್ನಲ್ಲೇ ಅವರೊಂದಿಗೆ ಪ್ರವಾಸ ಕೈಗೊಂಡಿದ್ದ ಇದ್ದ ಸವದತ್ತಿ ಶಾಸಕ, ಉಪಸಭಾಪತಿ ಆನಂದ ಮಾಮನಿಗೆ ಸೋಂಕು ದೃಢವಾಗಿದೆ. ಸಿಎಂ ಕಾರ್ ಚಾಲಕ, ಅಂಗರಕ್ಷಕರಿಗೂ ಟೆನ್ಷನ್ ಹೆಚ್ಚಾಗಿದೆ. ಇದಲ್ಲದೆ, 100ಕ್ಕೂ ಹೆಚ್ಚು ಜನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ಇರುವ ಸಾಧ್ಯತೆ ಇದೆ.

ವಿಜಯೇಂದ್ರ ಜೊತೆಗಿದ್ದ ರಾಯಚೂರಿನ 8 ಮಂದಿ ಬೆಂಬಲಿಗರಿಗೂ ಪಾಸಿಟಿವ್ ಆಗಿದೆ. ಈ ಮಧ್ಯೆ, ಸಭೆ ಓಪನ್ ಪ್ಲೇಸಲ್ಲಿ ನಡೆದಿತ್ತು. ಹಾಗಾಗಿ, ನಾನು ಮತ್ತೆ ಕ್ವಾರಂಟೈನ್ ಆಗ್ಬೇಕಾ? ಅಂತ ಪ್ರಶ್ನಿಸಿರೋ ಸಚಿವ ಸುಧಾಕರ್, 4 ದಿನ ಬಿಟ್ಟು ಟೆಸ್ಟ್ ಮಾಡಿಸ್ಕೊಳ್ತೇನೆ ಅಂದಿದ್ದಾರೆ.

ಸಿಎಂ ಜೊತೆ ಸಂಪರ್ಕಿತರು
* ಡಾ. ಸುಧಾಕರ್, ಆರೋಗ್ಯ ಸಚಿವರು
* ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ
* ಬೊಮ್ಮಾಯಿ, ಗೃಹ ಸಚಿವ
* ಉಮೇಶ್ ಕತ್ತಿ, ಆಹಾರ ಸಚಿವ
* ಜಗದೀಶ್ ಶೆಟ್ಟರ್, ಕೈಗಾರಿಕೆ ಸಚಿವ
* ಮುರುಗೇಶ್ ನಿರಾಣಿ, ಗಣಿ ಸಚಿವ
* ಸೋಮಣ್ಣ, ವಸತಿ ಸಚಿವ
* ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ

ಸಿಎಂ ಸಂಪರ್ಕಿತ ಅಧಿಕಾರಿಗಳು
* ರವಿಕುಮಾರ್, ಮುಖ್ಯ ಕಾರ್ಯದರ್ಶಿ
* ಗೌರವ ಗುಪ್ತಾ, ಬಿಬಿಎಂಪಿ ಮುಖ್ಯ ಆಯುಕ್ತ
* ಪ್ರವೀಣ್ ಸೂದ್, ಪೊಲೀಸ್ ಮಹಾನಿರ್ದೇಶಕ
* ಕಮಲ್ ಪಂತ್, ಪೊಲೀಸ್ ಆಯುಕ್ತ

Comments

Leave a Reply

Your email address will not be published. Required fields are marked *