ಸಿಎಂ ಬದಲಾವಣೆ ಆಗೋದಿಲ್ಲ: ಡಿಸಿಎಂ ಕಾರಜೋಳ

ಹಾವೇರಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ ಎಂಬುದನ್ನು ನಾನು ಮೊದಲಿನಿಂದಲೂ ಹೇಳಿದ್ದೇನೆ. ಲಾಕ್‍ಡೌನ್ ಮುಂದುವರೆಸುವ ಅವಶ್ಯಕತೆ ಇದೆ ಎಂಬ ಸಲಹೆ ಕೊಟ್ಟಿದ್ದೇನೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಹಿರಿಯ ಶಾಸಕ ಸಿ.ಎಂ.ಉದಾಸಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಕಟ್ಟಡ ಕಾಮಗಾರಿಗೆ, ಕಟ್ಟಡ ಕಟ್ಟಲು ಬೇಕಾದ ಸಾಮಗ್ರಿಗಳ ಮಾರಾಟ, ಅಟೋಮೊಬೈಲ್ ಸೇರಿದಂತೆ ಕೆಲವೊಂದು ಸಡಿಲಿಕೆ ಮಾಡಬೇಕು. ಹೀಗೆ ಅನೇಕ ವಿಚಾರಗಳನ್ನ ಹೇಳಿದ್ದೇನೆ. ಸಂಜೆ ಮುಖ್ಯಮಂತ್ರಿಗಳು ತಜ್ಞರ ಸಮಿತಿ ಸಭೆ ನಡೆಸಿ ಯಾವ ರೀತಿ ಗೈಡ್‍ಲೈನ್ಸ್ ಕೊಡುತ್ತಾರೋ ಆ ರೀತಿ ನಡೆದುಕೊಳುತ್ತೇವೆ ಎಂದರು.

ಶಾಸಕ ಸಿ.ಎಂ.ಉದಾಸಿ ನಮಗೆಲ್ಲ ಉತ್ತಮ ಮಾರ್ಗದರ್ಶಕರಾಗಿದ್ದರು. ಕೇವಲ ಜಿಲ್ಲೆ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಸಚಿವರಾಗಿ ಸಾಕಷ್ಟು ಕೆಲಸಗಳನ್ನ ಮಾಡಿದ್ದಾರೆ. ಶಾಸಕ ಸಿ.ಎಂ.ಉದಾಸಿ ಅವರಂತೆ ಅವರ ಕೆಲಸಗಳನ್ನು ಅವರ ಕುಟುಂಬದವರು ಮುಂದುವರೆಸಿಕೊಂಡು ಹೋಗಲಿ ಡಿ.ಸಿ.ಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಇದನ್ನು ಓದಿ:ಕಾಯಿಲೆಗಳಲ್ಲಿಯೇ ಸ್ವಾಭಿಮಾನಿ ಕಾಯಿಲೆ ಅಂದ್ರೆ ಕೊರೊನಾ : ಕಾಗಿನೆಲೆ ಶ್ರೀ

 

Comments

Leave a Reply

Your email address will not be published. Required fields are marked *