ಹೈದರಾಬಾದ್: ಸಾಲದ ಅರ್ಜಿಗಳನ್ನು ನಿರಾಕರಿಸಿದ ಕಾರಣ ಬ್ಯಾಂಕ್ ಮುಂದೆ ಕಸದ ರಾಶಿಯನ್ನು ಸುರಿಯುವ ಮೂಲಕ ಪೌರ ಕಾರ್ಮಿಕ ಅರ್ಜಿದಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವಯ್ಯೂರಿನ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.
ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳು ಜಗನ್ನಣತೋಡು ಮತ್ತು ಚೆಯುಥಾ ಯೋಜನೆಗಳ ಅಡಿಯಲ್ಲಿ ಸಾಲ ನೀಡಲು ನಿರಾಕರಿಸಲಾಗಿತ್ತು. ಇದು ಅರ್ಜಿದಾರರನ್ನು ಕೆರಳಿಸುವಂತೆ ಮಾಡಿದೆ. ಹೀಗಾಗಿ ಕೋಪಗೊಂಡ ಜನರು ಗುರುವಾರ ವುಯೂರು ಪಟ್ಟಣದ ಮೂರು ಬ್ಯಾಂಕ್ ಶಾಖೆಗಳ ಮುಂದೆ ಕಸದ ರಾಶಿಯನ್ನು ಸುರಿದ್ದಾರೆ. ಮಾರನೇ ದಿನ ಕೆಲಸಕ್ಕೆಂದು ಬ್ಯಾಂಕ್‍ಗೆ ಬಂದ ಅಧಿಕಾರಿಗಳು ಕಸದ ರಾಶಿಯನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಬಳಿಕ ಕೂಡಲೇ ತಮ್ಮ ಉನ್ನತ ಮೇಲಾಧಿಕಾರಿಗಳಿಗೆ ಮತ್ತು ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಂತರ ಕಸದ ರಾಶಿಯನ್ನು ತೆಗೆದು ಬ್ಯಾಂಕ್ ಮುಂದೆ ಸ್ವಚ್ಛಗೊಳಿಸಲಾಗಿದ್ದು, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮುಖಂಡರು ನೈರ್ಮಲ್ಯದ ಕೃತ್ಯವನ್ನು ಖಂಡಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಕೃಷ್ಣ ಜಿಲ್ಲಾಧಿಕಾರಿ ಎ.ಎಂಡಿ ಇಮ್ತಿಯಾಜ್, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಬಡವರಿಗೆ ಸಾಲ ಮಂಜೂರು ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸರ್ಕಾರ ಮತ್ತು ಬ್ಯಾಂಕ್ ಸಿಬ್ಬಂದಿ ಜೊತೆ ಸಹಕರಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲವು ಕಠಿಣ ಕ್ರಮ ಕೈಗೊಳ್ಳುವುದಾಗಿ ಬ್ಯಾಂಕುಗಳಿಗೆ ಭರವಸೆ ನೀಡಿದ್ದಾರೆ.

Leave a Reply