ಸಾರ್ವಜನಿಕವಾಗಿ ಮೂತ್ರವಿರ್ಸನೆ- ಆಕ್ಷೇಪಿಸಿದ ವ್ಯಕ್ತಿಯನ್ನು ಕೊಂದ ನಾಲ್ವರು

ಮುಂಬೈ: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಆಕ್ಷೇಪಿಸಿದ ವ್ಯಕ್ತಿಯನ್ನು ನಾಲ್ವರು ಸೇರಿ ಹೊಡೆದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಸಚಿನ್ ಪಾಟೀಲ್(35) ಎಂದು ಗುರುತಿಸಲಾಗಿದೆ. ಈತ ಸಾರ್ವಜನಿಕವಾಗಿ ಮೂತ್ರ ಮಾಡುತ್ತಿದ್ದವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಆಗ ಕೋಪಗೊಂಡ ಯುವಕರು ಹಲ್ಲೆ ಮಾಡಿದ್ದಾರೆ.

ನಾಲ್ವರು ಸಾರ್ವಜನಿಕರಿದ್ದಂತೆ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಈ ವೇಳೆ ಪಾಟೀಲ್ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ಹೇಳಿದ್ದಾರೆ. ಆಗ ಆಕಾಶ್ ಗಾಯಕ್‍ವಾಡ್ ಮತ್ತು ಸ್ನೇಹಿತರು ಈತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಸಾಥೆ ನಗರದಲ್ಲಿ ನಡೆದಿದೆ. ಗಾಯಕ್‍ವಾಡ್ ಮತ್ತು ಅವರ ಮೂವರು ಸ್ನೇಹಿತರು ನಂತರ ಪಾಟೀಲ್ ಮೇಲೆ ಹಲ್ಲೆ ನಡೆಸಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದು, ಪಾಟೀಲ್‍ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ರಬಲೆ ಎಂಐಡಿಸಿ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

ಹಲ್ಲೆ ಮಾಡಿದ ಗಯಾಕ್‍ವಾಡ್ ಮತ್ತು ಗ್ಯಾಂಗ್‍ನವರು ಸಾಥೆ ನಗರದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ನಾಲ್ವರನ್ನು ಬಂಧಿಸಲಾಗಿದೆ. ಈ ನಾಲ್ವರ ಮೇಲೆ ಕೊಲೆ ಆರೋಪ ಪ್ರಕರಣ ದಾಖಲಿಸಲಾಗಿದೆ. ಜನವರಿ 5 ರವರೆಗೆ ನಾವು ಕಸ್ಟಡಿಗೆ ಪಡೆದುಕೊಂಡಿದ್ದೇವೆ. ತನಿಖೆಯನ್ನು ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *