ಸಾಮಾನ್ಯ ಜನರೇ ನಮ್ಮ ಬಂಡವಾಳಶಾಹಿಗಳು- ರಾಹುಲ್‌ಗೆ ಸೀತಾರಾಮನ್ ತಿರುಗೇಟು

ನವದೆಹಲಿ: ಸಾಮಾನ್ಯ ಜನರೇ ನಮ್ಮ ಬಂಡವಾಳಶಾಹಿಗಳು, ಬೇರೆ ಯಾವ ಬಂಡವಾಳಶಾಹಿಗಳು ನಮ್ಮ ಸರ್ಕಾರಕ್ಕಿಲ್ಲ ಎಂದು ಹೇಳುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾವಿಬ್ಬರು, ನಮಗಿಬ್ಬರು ಎಂಬ ತತ್ವವನ್ನು ಅನುಸರಿಸುತ್ತಿದೆ. ಅವರು ಯಾರು ಎಂದು ನಾನು ಹೆಸರು ಹೇಳಬೇಕಿಲ್ಲ, ಎಲ್ಲರಿಗೂ ತಿಳಿದೇ ಇದೆ ಎಂದು ಹೇಳಿದ್ದರು. ಇದಕ್ಕೆ ಇದೀಗ ಲೋಕಸಭೆಯಲ್ಲಿಯೇ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ. ನಮಗೆ ಜನಸಾಮಾನ್ಯರೇ ಬಂಡವಾಶಾಹಿಗಳು ಎಂದು ಹೇಳಿದ್ದಾರೆ.

ಎಲ್ಲಿದ್ದಾರೆ ಬಂಡವಾಳಶಾಹಿಗಳು? ಜನರಿಂದ ತಿರಸ್ಕರಿಸಲ್ಪಟ್ಟ ಪಕ್ಷದ ನೆರಳಿನಲ್ಲೇ ಅಡಗಿ ಕುಳಿತಿರಬಹುದು. ಹಿಂದೆ ಯಾವುದೇ ಮುಕ್ತ ಟೆಂಡರ್, ಗ್ಲೋಬಲ್ ಟೆಂಡರ್ ಆಹ್ವಾನಿಸದೆ ಬೇಕಾಬಿಟ್ಟಿಯಾಗಿ ಸರ್ಕಾರ ನಡೆಸಲಾಗಿತ್ತು. ಇದೀಗ ರೈತರಿಗೆ ಬೆಂಬಲ ನೀಡುವುದರಿಂದ ರಾಹುಲ್ ಗಾಂಧಿ ಹಾಗೂ ಅವರ ಪಕ್ಷ ಯು ಟರ್ನ್ ಹೊಡೆದಿದೆ. ಕಾಂಗ್ರೆಸ್ ಆಡಳಿತವಿರುವ ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಪಂಜಾಬ್‍ಗಳಲ್ಲಿ ಸಾಲ ಮನ್ನಾ ಮಾಡುವ ಭರವಸೆಯನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಕೃಷಿ ಕಾನೂನುಗಳನ್ನು ಜಾರಿಗೆ ತಂದರೆ ಎಪಿಎಂಸಿಗಳು ಮುಚ್ಚುತ್ತವೆ ಎಂದು ಅವರು ಹೇಳುತ್ತಾರೆ. ಅವರು ಎಪಿಎಂಸಿಗಳ ಸ್ಥಿತಿಗತಿಯನ್ನು ಸುಧಾರಿಸಲು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ರಾಷ್ಟ್ರಪತಿ, ಪ್ರಧಾನಿ, ಸ್ಪೀಕರ್ ಎದುರು ಸಾಲು ಸಾಲು ಸುಳ್ಳುಗಳನ್ನು ಹೇಳಿದ್ದಾರೆ. ಈ ಮೂಲಕ ದೇಶಕ್ಕೇ ಅವಮಾನಿಸಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.

Comments

Leave a Reply

Your email address will not be published. Required fields are marked *