ಸಾಕ್ಷ್ಯಗಳಿದ್ರೆ ಪೊಲೀಸರಿಗೆ ನೀಡಲಿ: ಯುವತಿ ಪೋಷಕರ ಹೇಳಿಕೆಗೆ ಡಿಕೆಶಿ ತಿರುಗೇಟು

ರಾಯಚೂರು: ಸಾಕ್ಷ್ಯಗಳಿದ್ರೆ ಪೊಲೀಸರಿಗೆ ನೀಡಲಿ ಯುವತಿ ಪೋಷಕರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇಂದು ದಿಢೀರ್ ಮಾಧ್ಯಮಗಳ ಮುಂದೆ ಬಂದ ಯುವತಿ ಪೋಷಕರು, ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದರು.

ರಾಯಚೂರಿನ ಮುದಗಲ್ ನಲ್ಲಿ ಪೋಷಕರ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನನಗೂ ಸಿಡಿ ಲೇಡಿಗೂ ಸಂಬಂಧವಿಲ್ಲ. ಯಾರಬೇಕಾದರೂ ಏನು ಮಾಡಲಿ. ಒತ್ತಡದಲ್ಲಿರೋರು ಹೇಳಿಕೆಗೆ ಮತ್ತು ನನಗೂ ಸಂಬಂಧವಿಲ್ಲ. ಅವರ ಬಳಿ ದಾಖಲೆಗಳಿದ್ರೆ ಪೊಲೀಸರಿಗೆ ನೀಡಿ ತನಿಖೆ ಸಹಕರಿಸಲಿ ಎಂದು ಆರೋಪಗಳನ್ನ ತಳ್ಳಿ ಹಾಕಿದರು.

ಇಂದು ಬೆಳಗಾವಿಯಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ. ರಮೇಶ್ ಜಾರಕಿಹೊಳಿ ಅವರು ದಿನಕ್ಕೊಂದು ಮಾತನಾಡುತ್ತಾರೆ. ಏನ್ ಏನೋ ಮಾತನಾಡುತ್ತಾರೆ ಅವರ ಸುದ್ದಿಯನ್ನು ಬಿಟ್ಟು ಬಿಡಿ. ಎಲ್ಲರಿಗೂ ಒಳ್ಳೆಯದಾಗಲಿ. ಪಾಪ ಜಾರಕಿಹೊಳಿ ಬಗ್ಗೆ ನಾನು ಏನ್ ಮಾತನಾಡಲಿ. ಸಿಡಿ ಬಗ್ಗೆ ಮಾತಾಡಲ್ಲ ಎಲೆಕ್ಷನ್ ಮಾಡೋಣ ಎಂದು ಹೇಳಿದ್ದರು.

ಯುವತಿ ಪೋಷಕರು ಹೇಳಿದ್ದೇನು?: ಡಿ.ಕೆ.ಶಿವಕುಮಾರ್ ಅಣತಿಯಂತೆ ಆಕೆ ಕೆಲಸ ಮಾಡುತ್ತಿದ್ದಾಳೆ. ಆಕೆಯನ್ನ ರಾಜಕಾರಣದಲ್ಲಿ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಲೀಕ್ ಆಗಿರುವ ಆಡಿಯೋ ಕ್ಲಿಪ್ ನಿಜ. ಆದ್ರೆ ಅದು ಹೇಗೆ ಹೊರ ಬಂತು ಎಂಬುವುದರ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಸುರಕ್ಷತೆಯಲ್ಲಿದ್ದು, ಪೊಲೀಸರು ಭಧ್ರತೆ ನೀಡಿದ್ದಾರೆ. ಇದಕ್ಕೆಲ್ಲಾ ಡಿ.ಕೆ.ಶಿವಕುಮಾರ್ ನೇರ ಕಾರಣ. ಅವರು ನೀಡಿದ ಹಣದಿಂದಲೇ ಸೋದರಿ ಗೋವಾದತ್ತ ಹೋಗುತ್ತಿರೋದಾಗಿ ಹೇಳಿದ್ದಳು. ಬೇಕಾದ್ರೆ ಆಡಿಯೋ ಕ್ಲಿಪ್ ನಿಮಗೆಲ್ಲರಿಗೂ ಕೇಳಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

Comments

Leave a Reply

Your email address will not be published. Required fields are marked *