ಸಲ್ಮಾನ್‍ಗೆ 55ರ ಸಂಭ್ರಮ- ಅಭಿಮಾನಿಗಳಲ್ಲಿ ಬ್ಯಾಡ್‍ಬಾಯ್ ವಿಶೇಷ ಮನವಿ

ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ನಟ ಸಲ್ಮಾನ್ ಖಾನ್‍ಗೆ ಇಂದು 55ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಸಲ್ಲು ಹುಟ್ಟು ಹಬ್ಬವೆಂದರೆ ಸಾಕು ಅದು ಅಭಿಮಾನಿಗಳಿ ಹಬ್ಬದ ಆಚರಣೆ.

ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ಸಲ್ಲು ಮನೆಯ ಮುಂದೆ ಅಭಿಮಾನಿಗಳ ಸಾಗರವೇ ಹರಿದು ಬರುತ್ತಿತ್ತು. ಆದ್ರೆ ಈ ಬಾರಿ ಕೋವಿಡ್ -19 ಇರುವುದರಿಂದ ಅಭಿಮಾನಿಗಳು ಯಾರೂ ಮನೆಯ ಮುಂದೆ ಬರಬೇಡಿ. ನಿಮ್ಮ ಆರೋಗ್ಯದ ಕಾಳಜಿಯಿಂದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ಈ ಬಾರಿ ಮನೆಯ ಮುಂದೆ ಗುಂಪು ಗುಂಪಾಗಿ ಸೇರಬೇಡಿ ದೂರದಿಂದಲೇ ನನಗೆ ಆಶೀರ್ವಾದಿಸಿ ಶುಭ ಹಾರೈಸಿ ಎಂದು ಮನವಿ ಮಾಡಿದ್ದರು. ಜೊತೆಗೆ ಕೋವಿಡ್ ಸಮಯದಲ್ಲಿ ರಿಸ್ಕ್ ಯಾರು ತೆಗೆದುಕೊಳ್ಳಬೇಡಿ ಇದರಿಂದ ಸಾಮಾಜಿಕ ಅಂತರಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಮನೆಯ ಮುಂದೆ ಅಭಿಮಾನಿಗಳು ದೌಡಾಯಿಸುವುದು ಬೇಡ. ಎಂದು ಮನೆಯ ಗೇಟಿನ ಮುಂದೆ ದೊಡ್ಡ ನೋಟಿಸ್ ಕೂಡ ಅಂಟಿಸಿದ್ದಾರೆ.

ಪ್ರತಿ ಬಾರಿ ಅಭಿಮಾನಿಗಳ ಮಧ್ಯೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸಲ್ಮಾನ್ ಖಾನ್ ಈ ಬಾರಿ ಕುಟುಂಬ ಸದಸ್ಯರ ಜೊತೆ ಹಾಗೂ ಕೆಲವು ಸ್ನೇಹಿತರ ಜೊತೆ ತಮ್ಮ ಪನ್ವೆಲ್ ತೋಟದ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನೂ ಬರ್ತಡೇಯ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಮಾಧುರಿ ದೀಕ್ಷತ್, ಅಸಿಮ್ ರಿಯಾಜ್, ನಿರೂಪಕ ಮನೀಶ್‍ಪೌಲ್, ಖಿಲ್ಜಿ ನಜಿಮ್, ರವೀನಾ, ಜಾಕ್ವೆಲಿನ್ ಫರ್ನಾಂಡಿಸ್, ಭಾರತಿ ಸಿಂಗ್, ಶಾರದೂಲ್ ಪಂಡಿತ್, ಟಾಲಿವುಡ್ ನಟ ವೆಂಕಟೇಶ್, ಅಜಾಜ್ ಖಾನ್, ನಟ ವರುಣ್ ಧವನ್, ಗೌತಮ್ ಗುಲಾತಿ, ವಿಕಾಸ್ ಕಲಂತ್ರಿ ಸೇರಿದಂತೆ ಹಲವಾರು ಕಲಾವಿದರು ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

 

View this post on Instagram

 

A post shared by VarunDhawan (@varundvn)

ಸದ್ಯ ಪ್ರಭುದೇವ ನಿರ್ದೇಶನದಲ್ಲಿ ಸಲ್ಮಾನ್ ಖಾನ್‍ರ ರಾಧೆ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಟ್ರೆಲರ್ ರಿಲೀಸ್ ಆಗಿದೆ. ಟ್ರೆಲರ್‍ನಲ್ಲಿ ಸಲ್ಲು ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ಮೇ 22ರಂದು ರಾಧೆ ಚಿತ್ರ ಬಿಡುಗಡೆಯಾಗಬೇಕಿತ್ತು ಆದ್ರೆ ಕೊರೊನಾ ಸಾಂಕ್ರಾಮಿಕ ರೋಗದಿಂದ ಸಿನಿಮಾ ಪರದೆ ಮೇಲೆ ಬರಲು ತಡವಾಗಿದೆ. ಈ ನಡುವೆ ಸಲ್ಮಾನ್ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್‍ಬಾಸ್ ಸೀಸನ್-14 ಬ್ಯುಸಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *