ಸಲಿಂಗ ಕಾಮಕ್ಕಾಗಿ ಬಾಲಕರನ್ನ ಅಪಹರಿಸಿದ್ದವನಿಗೆ 10 ವರ್ಷ ಜೈಲು

– ಕೊಪ್ಪಳದ ಹಾಸ್ಟೆಲ್ ನಿಂದ ಬಾಲಕನ ಕಿಡ್ನ್ಯಾಪ್

ಕೊಪ್ಪಳ: ಸಲಿಂಗ ಕಾಮಕ್ಕಾಗಿ ವಸತಿ ನಿಲಯದ ವಿದ್ಯಾರ್ಥಿಗಳನ್ನ ಅಪಹರಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದ ವ್ಯಕ್ತಿಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದೆ.

2018ರಲ್ಲಿ ದೋಷಿ ವಿದ್ಯಾರ್ಥಿಗಳನ್ನ ಅಪಹರಿಸಿದ್ದನು. ಅದರಲ್ಲಿ ಕೊಪ್ಪಳದ ವಸತಿ ನಿಲಯದ ವಿದ್ಯಾರ್ಥಿ ಸಹ ಒಬ್ಬನಿದ್ದನು. ಬಾಲಕರಿಗೆ ಮೊಬೈಲ್ ಆಮಿಷ ತೋರಿಸಿ ಬೆಂಗಳೂರು, ತಿರುಪತಿ, ರಾಯಚೂರು, ಗದಗ, ಕಲಬುರಗಿ ಸೇರಿದಂತೆ ಹಲವು ಊರುಗಳಿಗೆ ಬಾಲಕರ ಜೊತೆ ತಿರುಗಾಡಿದ್ದನು. ಈ ವೇಳೆ ಬಾಲಕರನ್ನ ಸಲಿಂಗಕಾಮಕ್ಕಾಗಿ ಬಳಸಿಕೊಂಡಿದ್ದನು.

ಬೆಂಗಳೂರಿನಲ್ಲಿ ಸಿಕ್ಕ ಆರೋಪಿಯನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಕೊಪ್ಪಳ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಎಸ್.ಎಂ.ಜಲವಾದಿಯವರುಪ್ರಕರಣದ ವಿಚಾರಣೆ ನಡೆಸಿದ್ದರು. ಕೋರ್ಟ್‌ ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈಗ ಶಿಕ್ಷೆಯನ್ನು ಪ್ರಕಟಿಸಲಾಗಿದೆ.

Comments

Leave a Reply

Your email address will not be published. Required fields are marked *