ಸರ್ಕಾರದ ವಿರುದ್ಧ ಸಿಡಿದೆದ್ದ ಚಿತ್ರರಂಗ – ಸಚಿವ ಸುಧಾಕರ್ ಹೇಳಿದ್ದೇನು..?

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದ್ದಕ್ಕಾಗಿ ಇಂದು ಕನ್ನಡ ಚಿತ್ರರಂಗ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಈ ಸಂಬಂಧ ಆರೋಗ್ಯ ಸಚಿವ ಕೆ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮತ್ತೊಮ್ಮೆ ತಾಂತ್ರಿಕ ಸಲಹಾ ಸಮಿತಿ ಮತ್ತು ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಿದೆ. ಸಿಎಂ ಜೊತೆಗೂ ಸಮಾಲೋಚನೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಕೇಂದ್ರ ಸರ್ಕಾರ ಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಸೂಚಿಸಿದೆ. ನಂತರ ರಾಜ್ಯ ಕ್ರಮಕೈಗೊಳ್ಳಲು ಸೂಚಿಸಿದೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಪ್ರಕಾರ ನಾವು ಎಸ್‍ಓಪಿ ಬಿಡುಗಡೆ ಮಾಡಿದ್ದೇವೆ. ಫೆ.28 ವರೆಗೂ ಶೇ.50ರಷ್ಟು ತುಂಬಬಹುದು. ನೆರೆಯ ಕೇರಳದಲ್ಲಿ ಪ್ರತೀ ದಿನ 5 ಸಾವಿರ ಕೇಸ್ ದಾಖಲಾಗ್ತಿದೆ. ಮನರಂಜನೆಗಿಂತ ಮುಖ್ಯ ಜನರ ಆರೋಗ್ಯ. ಮತ್ತೊಮ್ಮೆ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡುತ್ತೇನೆ. ಅವರ ಸಲಹೆ ಮೇರೆಗೆ ಅಂತಿಮ ನಿರ್ಧಾರ ಮಾಡುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಚಿತ್ರ ಮಂದಿರ ಅಂದ್ರೆ ಕ್ಲೋಸ್ಡ್, ಎಸಿ ಇರೋ ಜಾಗ. ಬಹಳ ಬೇಗನೆ ಸೋಂಕು ಹರಡಲಿದೆ. ರಾಜಕಾರಣದ ಸಭೆ ಸರಿ ಅಂತ ನಾವು ಹೇಳಿಲ್ಲ. ಆದ್ರೆ ಹೊರಗಡೆ ಮಾಡ್ತಿದ್ದಾರೆ, ಆದರೆ ಅದೂ ಸರಿ ಅಂತ ಹೇಳಲ್ಲ. ನಿಯಂತ್ರಣ ಮಾಡೋದು ನಮ್ಮ ಸರ್ಕಾರದ ಜವಾಬ್ದಾರಿ. ನಾನು ಮಂತ್ರಿಯಾಗಿ ಏಕಾಏಕಿ ನಿರ್ಧಾರ ಸಾಧ್ಯವಾಗಲ್ಲ. ಸಿಎಂ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಮುಂದೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *