ಬೆಂಗಳೂರು: ಅಧಿವೇಶನ ಬೆನ್ನಲ್ಲೇ ಸೋಂಕಿತ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಕಾನೂನು ಸಚಿವ ಮಾಧುಸ್ವಾಮಿ, ಕಾಂಗ್ರೆಸ್‍ನ ಹಿರಿಯ ಮುಖಂಡ ಹೆಚ್‍ಕೆ ಪಾಟೀಲ್‍ಗೆ ಸೋಂಕು ದೃಢವಾಗಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾನೂನು ಖಾತೆ ಸಚಿವರು ಮತ್ತು ಆತ್ಮೀಯರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಶೀಘ್ರದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಚೇತರಿಸಿಕೊಳ್ಳಲಿ, ಮತ್ತೆ ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಲಿ ಎಂದು ಹಾರೈಸುತ್ತೇನೆ.@jcmbjp
— B.S. Yediyurappa (@BSYBJP) September 28, 2020
ಅಧಿವೇಶನದ ಬೆನ್ನಲ್ಲೇ ನಿನ್ನೆ ದಿನೇಶ್ ಗುಂಡೂರಾವ್‍ಗೆ ಕೊರೊನಾ ಸೋಂಕು ದೃಢವಾಗಿತ್ತು. ಇಂದು ಸಚಿವ ಮಾಧುಸ್ವಾಮಿ ಅವರಿಗೆ ಸೋಂಕು ದೃಢವಾಗಿದ್ದು, ಶೀಘ್ರ ಗುಣಮುಖರಾಗಲಿ ಎಂದು ಸಿಎಂ ಬಿಎಸ್‍ವೈ ಸೇರಿದಂತೆ ಹಲವು ನಾಯಕರು ಪ್ರಾರ್ಥನೆ ಮಾಡುವುದಾಗಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಚಿವರ ಕಾರಿನ ಚಾಲಕ ಮತ್ತು ಮನೆಯ ಕೆಲಸಗಾರನಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮಾಧುಸ್ವಾಮಿ ಅವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಪಾಸಿಟಿವ್ ಬಂದಿದೆ, ದೂರ ಉಳಿಯಲು ಹೇಳಿ: ಮಾಧುಸ್ವಾಮಿ
ಮಾಜಿ ಸಚಿವರು, ಹಿರಿಯ ಕಾಂಗ್ರೆಸ್ ನಾಯಕರಾದ ಶ್ರೀ ಹೆಚ್.ಕೆ.ಪಾಟೀಲ್ ಅವರು ಆದಷ್ಟು ಬೇಗನೆ ಕೊರೋನಾ ಸೋಂಕಿನಿಂದ ಗುಣಮುಖರಾಗಲಿ, ಮತ್ತೆ ತಮ್ಮ ಕರ್ತವ್ಯಗಳಲ್ಲಿ ಎಂದಿನಂತೆ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ. https://t.co/LPKIV0yQEQ
— B.S. Yediyurappa (@BSYBJP) September 28, 2020

Leave a Reply