ಸಚಿವರ ಸಭೆಗೆ ಹೊರಟಿದ್ದ ಅಧಿಕಾರಿಗಳ ಕಾರ್ ಪಲ್ಟಿ

– ಲೋಕೋಪಯೋಗಿ ಇಲಾಖೆ ಅಧಿಕಾರಿ ಸಾವು

ಕಾರವಾರ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಉಸ್ತುವಾರಿ ಸಚಿವರ ಸಭೆಗೆ ಬರುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಸಿದ್ದಾಪುರ ತಾಲೂಕಿನ ಲೋಕೋಪಯೋಗಿ ಇಲಾಖೆಯ ಎಇ.ಇ ಸಾವನ್ನಪ್ಪಿದ್ದಾರೆ. ನಾಲ್ಕು ಜನ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಬಾಳೆಗುಳಿ ಬಳಿ ಅಪಘಾತ ಸಂಭವಿಸಿದೆ.

ಸಿದ್ದಾಪುರ ತಾಲೂಕಿನ ಲೋಕೋಪಯೋಗಿ ಇಲಾಖೆ ಎಇಇ ಮುದುಕಣ್ಣನವರ್( 58) ಮೃತ ಪಟ್ಟ ಅಧಿಕಾರಿ. ಗಂಭೀರವಾಗಿ ಗಾಯಗೊಂಡವರನ್ನು ಅಂಕೋಲ ಹಾಗೂ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:  ಮಳೆಯ ಅಬ್ಬರ- ಕಾರವಾರದಲ್ಲಿ ರಾಶಿ ರಾಶಿ ಮೀನುಗಳು ಬಲೆಗೆ

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ನೆರೆ ಹಾಗೂ ಕೊರೊನಾ ಸಂಬಂಧ ಅಧಿಕಾರಿಗಳ ಸಭೆ ಇದಾಗಿದ್ದು, ಸಭೆಗೆ ಲೋಕೋಪಯೋಗಿ ಇಲಾಖೆಯ ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕಿನ ಇಂಜಿನಿಯರ್ ಗಳು ಒಂದೇ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಅಂಕೋಲದ ಬಾಳೆಗುಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಅನಾಹುತ ಸಂಭವಿಸಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ವಿವರ ಬರಬೇಕಿದೆ. ಇದನ್ನೂ ಓದಿ: ಭಟ್ಕಳದಲ್ಲಿ NIA ದಾಳಿ- ಭಯೋತ್ಪಾದಕರೊಂದಿಗೆ ಸಂಪರ್ಕ, ಮೂವರು ವಶಕ್ಕೆ

Comments

Leave a Reply

Your email address will not be published. Required fields are marked *