ಧಾರವಾಡ: ಸಂಸದರ ಆದರ್ಶ ಗ್ರಾಮಗಳು ಈಗಲೂ ಮೊದಲಿನಂತೆಯೇ ಇವೆ. ಅದಕ್ಕೆ ಕಾರಣ ಆ ಗ್ರಾಮ ದತ್ತು ಪಡೆದ ಸಂಸದರು ಅಭಿವೃದ್ಧಿ ಪಡಿಸದೇ ಇರುವುದು.
ಹೌದು. ಧಾರವಾಡ ಜಿಲ್ಲೆಯ ಸಂಸದರ ಗ್ರಾಮದ ಸ್ಥಿತಿ ಅದೇ ರೀತಿಯಾಗಿದೆ. ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಹಾರೋಬೆಳವಡಿ ಹಾಗೂ ಕಬ್ಬೇನೂರ ಗ್ರಾಮಗಳನ್ನ ದತ್ತು ಪಡೆದಿದ್ದರು. ಕಬ್ಬೇನೂರ ಗ್ರಾಮದಲ್ಲಿ ಶಾಲೆ ಕಟ್ಟಡಕ್ಕೆ ಅಡಿಪಾಯ ಕೂಡ ಹಾಕಲಾಗಿತ್ತು. ಈ ಕಟ್ಟಡ ನಿರ್ಮಾಣ ಆಗಬಹುದು ಎಂದು ಎಲ್ಲರೂ ನೋಡುತ್ತಿದ್ದರೆ, ಅದು ಆಗಲೇ ಇಲ್ಲ.

ಈಗ ಇರುವ ಹಳೆ ಶಾಲೆ ಕಟ್ಟಡ ಕೂಡ ಬಿಳುತ್ತಿದೆ. ಸರ್ಕಾರ ಶಾಲೆ ಆರಂಭಕ್ಕೆ ಏನಾದರೂ ಅನುಮತಿ ನೀಡಿದ್ರೆ ಮಕ್ಕಳಿಗೆ ಕುಳಿತುಕೊಳ್ಳಲು ಕಟ್ಟಡನೇ ಇಲ್ಲದಂತಾಗುತ್ತೆ. ಈ ಬಗ್ಗೆ ಸಂಸದರಿಗೆ ಕೇಳಿದ್ರೆ ಕೊರೊನಾ ಹಿನ್ನೆಲೆ ಸಿಎಸ್ ಆರ್ ಫಂಡ್ ಬಂದಿಲ್ಲ ಎನ್ನುತ್ತಾರೆ.
ಗ್ರಾಮಸ್ಥರು ಹೊಸ ಕಟ್ಟಡದ ಅಡಿಪಾಯ ಹಾಕಿದ್ದಕ್ಕೆ ಹಳೆ ಕಟ್ಟಡದ ದುರಸ್ತಿ ಕೂಡ ಆಗ್ತಿಲ್ಲ. ಹೀಗಾಗಿ ಸಂಸದರು ಈಗ ಕೇಂದ್ರ ಸಚಿವರು ಇದ್ದಾರೆ, ವಿಶೇಷ ಅನುದಾನದಲ್ಲಿ ಶಾಲೆ ಕಟ್ಟಡ ನಿರ್ಮಾಣ ಮಾಡಲಿ ಎಂದು ಆಗ್ರಹಿಸಿದ್ದಾರೆ.

Leave a Reply