ಸಂಕಷ್ಟದಲ್ಲಿ ರೈತರ ಕೈ ಹಿಡಿದ ಕೆಎಂಎಫ್ – ಗ್ರಾಹಕರಿಗೆ ಉಚಿತ ಮೂರು ಸಾವಿರ ಲೀ.ಹಾಲು

ಚಾಮರಾಜನಗರ: ಕೊರೊನಾ ಸಂಕಷ್ಟ ಕಾಲದಲ್ಲಿ ಕೆಎಂಎಫ್ ರೈತರ ಕೈ ಹಿಡಿದಿದೆ. ಮಳೆಗಾಲದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೈತರಿಂದ ಎಲ್ಲಾ ಹಾಲನ್ನು ಖರೀದಿಸುತ್ತಿರುವ ಕೆಎಂಎಫ್ ಗ್ರಾಹಕರಿಗೆ ಉಚಿತವಾಗಿ ಅಧಿಕ ಹಾಲು ಪೂರೈಸುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆ ರೈತರ ಮುಖ್ಯ ಕಸುಬಾಗಿ ಪರಿವರ್ತನೆಯಾಗಿದೆ. ಜೀವನೋಪಾಯಕ್ಕಾಗಿ ಹೈನುಗಾರಿಕೆಯನ್ನೆ ನಂಬಿರುವ ರಾಜ್ಯದ ರೈತರಿಗೆ ಕೆಎಂಎಫ್ ಬೆನ್ನೆಲುಬಾಗಿ ನಿಂತಿದೆ. ಇದನ್ನೂ ಓದಿ:ಜೈನ ಪುರೋಹಿತರಿಗೆ ಸರ್ಕಾರದಿಂದ ಧನ ಸಹಾಯ ನೀಡುವಂತೆ ಸಿಎಂಗೆ ಮನವಿ

ಕೊರೊನಾ ಸಂಕಷ್ಟ ಕಾಲದಲ್ಲಿ ಕೆಎಂಎಫ್ ರೈತರ ಕೈ ಹಿಡಿದಿದೆ. ಮಳೆಗಾಲದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೈತರಿಂದ ಎಲ್ಲಾ ಹಾಲನ್ನು ಖರೀದಿಸುತ್ತಿರುವ ಕೆಎಂಎಫ್ ಗ್ರಾಹಕರಿಗೆ ಉಚಿತವಾಗಿ ಅಧಿಕ ಹಾಲು ಪೂರೈಸುತ್ತಿದೆ. ಪ್ರತಿ ಲೀಟರ್ ಹಾಲಿನ ಜೊತೆಗೆ ಉಚಿತವಾಗಿ 40 ಮಿಲಿ ಲೀಟರ್ ಹಾಲನ್ನು ನೀಡಲಾಗುತ್ತಿದ್ದು, ರಾಜ್ಯಾದ್ಯಂತ ಪ್ರತಿ ದಿನ 33 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಜೂನ್ 1 ರಿಂದ 33 ಲಕ್ಷ ಲೀಟರ್ ಜೊತೆಗೆ ಉಚಿತವಾಗಿ 1.32 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ. ಇದೇ ರೀತಿ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಿಂದಲೂ ಗ್ರಾಹಕರಿಗೆ ಪ್ರತಿದಿನ ಉಚಿತವಾಗಿ 3 ಸಾವಿರ ಲೀಟರ್ ಹಾಲು ನೀಡಲಾಗುತ್ತಿದೆ.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಚಾಮುಲ್ ನಿಂದ ನಿರ್ಗತಿಕರಿಗೆ, ಕೊಳಚೆ ಪ್ರದೇಶದ ನಿವಾಸಿಗಳಿಗೆ ಸರ್ಕಾರದ ನಿರ್ದೇಶನದಂತೆ ಉಚಿತವಾಗಿ ಪ್ರತಿ ದಿನ ಹತ್ತು ಸಾವಿರ ಲೀಟರ್ ಹಾಲು ವಿತರಿಸಲಾಗಿತ್ತು ಇದಕ್ಕಾಗಿ ಸರ್ಕಾರ ಚಾಮುಲ್ ಗೆ ಹಣ ನೀಡಿತ್ತು. ಆದರೆ ಈ ಬಾರಿ ಚಾಮುಲ್ ಗೆ ನಷ್ಟವಾದರೂ ರೈತರ ಹಿತದೃಷ್ಟಿಯಿಂದ ಹಾಲು ಖರೀದಿಸಿ ಗ್ರಾಹಕರಿಗೆ ಉಚಿತವಾಗಿ ಹೆಚ್ಚುವರಿ ಹಾಲು ಪೂರೈಕೆ ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಹಾಲು ಕುಡಿಯಿರಿ ಆರೋಗ್ಯವಾಗಿರಿ ಎಂಬ ಅಭಿಯಾನ ಆರಂಭಿಸಿರುವ ಕೆಎಂಎಫ್ ಜೂನ್ 1 ರಿಂದ ಪ್ರತಿ ದಿನ 1.32 ಲಕ್ಷ ಲೀಟರ್‌ಗಿಂತಲೂ ಹೆಚ್ಚು ಹಾಲನ್ನು ಗ್ರಾಹಕರಿಗೆ ಉಚಿತವಾಗಿ ಪೂರೈಸುತ್ತಿರುವುದು ಗಮನಾರ್ಹವಾಗಿದೆ. ಇದನ್ನೂ ಓದಿ: ಕೆಎಲ್‍ಇ ಆಸ್ಪತ್ರೆಯಿಂದ ಲಸಿಕೆ ಖರೀದಿಸಿ ಯುವಕರಿಗೆ ಉಚಿತವಾಗಿ ಹಂಚಿದ ಗಣೇಶ್ ಹುಕ್ಕೇರಿ

Comments

Leave a Reply

Your email address will not be published. Required fields are marked *