– ಅಕ್ಕ ಪಕ್ಕದಲ್ಲಿ ಇರೋರಿಂದ ಪಿತೂರಿ
ಬೆಂಗಳೂರು: ನನ್ನ ವಿರುದ್ಧ ಷಡ್ಯಂತ್ರ ಮಾಡಿದವರು ಬೆಂಗಳೂರಿನಲ್ಲಿಯೇ ಇದ್ದಾರೆ. ಉತ್ತರ ಕರ್ನಾಟಕ ಮತ್ತು ಬೆಂಗಳೂರಿನಲ್ಲಿರುವ ಜನರೇ ನನ್ನ ವಿರುದ್ಧ ಆರೇಳು ತಿಂಗಳು ಪಿತೂರಿ ಮಾಡಿದ್ದು, ಮುಂಬೈಗೂ ಈ ಘಟನೆಗೂ ಸಂಬಂಧವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ದೆಹಲಿಯಿಂದ ಕೆಲ ವಕೀಲರು ಬೆಂಗಳೂರಿಗೆ ಬರಲಿದ್ದು, ಅವರ ಜೊತೆ ಚರ್ಚಿಸಿ ದೂರು ನೀಡುತ್ತೇವೆ. ಕಾನೂನು ಹೋರಾಟವನ್ನ ಬಾಲಚಂದ್ರ ಜಾರಕಿಹೊಳಿ ನೋಡಿಕೊಳ್ಳಲಿದ್ದಾರೆ. ರಾಜಕೀಯಕ್ಕೆ ಮತ್ತೆ ಬರಬೇಕೆಂಬ ಆಸೆ ನನಗಿಲ್ಲ. ಆದ್ರೆ ಅವರನ್ನ ಮಟ್ಟ ಹಾಕೋಕೆ ಎಷ್ಟು ಬೇಕಾದ್ರೂ ಹಣ ಖರ್ಚು ಆಗಲಿ, ನಾನು ಹಿಂದೇಟು ಹಾಕಲ್ಲ ಎಂದು ವೀಡಿಯೋ ರೂವಾರಿಗಳಿಗೆ ರಮೇಶ್ ಜಾರಕಿಹೊಳಿ ಸಂದೇಶ ರವಾನಿಸಿದರು.

ಬಿಜೆಪಿ ಸರ್ಕಾರ ತಂದಿದ್ದೇನೆ. ಅವರ ಸರ್ಕಾರದಲ್ಲಿ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿರುವಾಗ ಅವರೇಕೆ ನನ್ನ ವಿರುದ್ಧ ಪಿತೂರಿ ಮಾಡ್ತಾರೆ. ಕಾಂಗ್ರೆಸ್, ಜೆಡಿಎಸ್ ಯಾರೇ ಆಗಲಿ ನನ್ನ ವಿರುದ್ಧ ಮಾತನಾಡಿಲ್ಲ. ಒಂದಿಬ್ಬರು ತಮ್ಮ ಸ್ವಾರ್ಥಕ್ಕಾಗಿ ಈ ಕೆಲಸ ಮಾಡಿದ್ದಾರೆ. ನಮ್ಮ ಹಾಗೆ ಧೈರ್ಯದಿಂದ ಇರಲು ಎಲ್ಲರಿಗೂ ಸಾಧ್ಯವಿಲ್ಲ. ನಮಗೆ ಕುಟುಂಬ ಮತ್ತು ಕ್ಷೇತ್ರದ ಜನತೆಯ ಬೆಂಬಲವಿದೆ. ಹಾಗಾಗಿ ಕೆಲವರು ಮುನ್ನೆಚ್ಚರಿಕೆಯಾಗಿ ನ್ಯಾಯಾಲಯದ ಮೊರೆ ಹೋಗಿದ್ದರಲ್ಲಿ ತಪ್ಪಿಲ್ಲ ಎಂದು ಸಚಿವರನ್ನ ಸಮರ್ಥಿಸಿಕೊಂಡರು. ಇದನ್ನೂ ಓದಿ: ನನಗೇನೂ ಗೊತ್ತಿಲ್ಲ, ತುಂಬಾ ದುಃಖದಲ್ಲಿದ್ದೇನೆ: ರಮೇಶ್ ಜಾರಕಿಹೊಳಿ ಕಣ್ಣೀರು
ನಮ್ಮ ವಿರೋಧಿಗಳು ಶೋಕಿ ನಾಯಕರು. ಆ ಮಹಾನ್ ನಾಯಕ ಸಹ ತುಂಬಾ ವೀಕ್. ಸುಲಭವಾಗಿ ಅವರನ್ನ ಸೋಲಿಸುತ್ತೇವೆ. ಅವರ ಹೆಸರು ಮೊಬೈಲ್ ನಂಬರ್ ಗೊತ್ತಿದೆ. ಕಾನೂನು ಹೋರಾಟಕ್ಕೆ ತೊಂದರೆ ಆಗಬಾರದು. ಹಾಗಾಗಿ ಹೆಚ್ಚಾಗಿ ಪ್ರಕರಣದ ಬಗ್ಗೆ ಮಾಹಿತಿ ನೀಡಲ್ಲ. ಇದನ್ನೂ ಓದಿ: ಎಷ್ಟೇ ಕೋಟಿ ಖರ್ಚಾಗಲಿ, ಅವರನ್ನ ಜೈಲಿಗೆ ಕಳಸ್ತೀನಿ: ಸಾಹುಕಾರ ಚಾಲೆಂಜ್
ಆತ್ಮವಿಶ್ವಾಸ ಇದ್ದವ್ರು ಕೋರ್ಟಿಗೆ ಯಾಕೆ ಹೋಗಬೇಕು?- ಹೆಚ್ಡಿಕೆ ಪ್ರಶ್ನೆhttps://t.co/IOsG13r0fi#HDKumaraswamy #BJP #JDS #Court #Kannadanews #Politics
— PublicTV (@publictvnews) March 9, 2021
ಉತ್ತರ ಕರ್ನಾಟಕ, ಮುಂಬೈ, ಹೈದರಾಬಾದ್ ಕರ್ನಾಟಕದವರು ಇಂತಹ ಕೀಳು ಮಟ್ಟದ ರಾಜಕಾರಣ ಮಾಡಲ್ಲ. ಕಷ್ಟದ ಸಮಯದಲ್ಲಿ ವಿರೋಧಿಗಳ ಸಹಾಯಕ್ಕೆ ಹೋಗುತ್ತೇವೆ. ರಾಜಕೀಯವಾಗಿ ಮಾತ್ರ ನಾವು ವಿರೋಧಿಗಳಾಗಿರುತ್ತೇವೆ. ಆದ್ರೆ ಬೆಂಗಳೂರು ಭಾಗದ ಕೆಲವರು ಥರ್ಡ್ ಕ್ಲಾಸ್ ರಾಜಕಾರಣ ಮಾಡುತ್ತಾರೆ ಎಂದರು. ಇದನ್ನೂ ಓದಿ: ರಾಜಕೀಯದಲ್ಲಿ ಇಂಟರೆಸ್ಟ್ ಇಲ್ಲ, ಕುಟುಂಬ ಮುಖ್ಯ: ಜಾರಕಿಹೊಳಿ ವೈರಾಗ್ಯದ ಮಾತು

Leave a Reply