ಶ್ವಾನ ತರಲು ಹೋದವನು ಕೊಲೆಯಾದ

ಹಾಸನ: ಶ್ವಾನ ತರಲು ಹೋದ ಯುವಕನನ್ನು ಡ್ರ್ಯಾಗರ್ ನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ದೊಡ್ಡಮಂಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮನೋಜ್ (20) ಸ್ನೇಹಿತರಿಂದಲೇ ಕೊಲೆಯಾದ ಯುವಕ. ಎರಡು ಮೂರು ಕಡೆ ಚುಚ್ಚಿ ಕೊಲೆ ಮಾಡಿ ಮೋರಿ ಕೆಳಗೆ ಬಿಸಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಾಸನದ ವಿಜಯ ನಗರದಲ್ಲಿ ಈ ಘಟನೆ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಭಾನುವಾರ ಮನೆಯವರಿಗೆ ಶ್ವಾನ ತರಲೆಂದು ಹೋಗುತ್ತಿದ್ದೇನೆ ಎಂದು ಹೊರ ಹೋಗಿದ್ದ ಮನೋಜ್, ಇಂದು ಹಾಸನದ ಹೊರವಲಯ ವಿಜಯನಗರ ಬಡಾವಣೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಪೆನ್ಷನ್ ಮೊಹಲ್ಲಾ ಪೊಲೀಸರು ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪಾತಕರಿಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *