ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 2ನೇ ಪುಣ್ಯ ಸ್ಮರಣೆ – ಸಿದ್ದಗಂಗಾ ಮಠದಲ್ಲಿ ವಿಶೇಷ ಪೂಜೆ

ತುಮಕೂರು: ಇಂದು ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಎರಡನೇ ವರ್ಷದ ಪುಣ್ಯ ಸ್ಮರಣೆ. ಹೀಗಾಗಿ ಶ್ರೀ ಕ್ಷೇತ್ರ ಸಿದ್ದಗಂಗೆಯಲ್ಲಿ ನಸುಕಿನ ಜಾವ 4 ಗಂಟೆಯಿಂದಲೇ ವಿವಿಧ ಪೂಜಾ ಕಾರ್ಯಗಳು ಆರಂಭವಾಗಿವೆ. ಅಲಂಕೃತ ಗೊಂಡ ಶ್ರೀಗಳ ಗದ್ದುಗೆಯಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿವೆ.

ಲಗುನ್ಯಾಸ ಸಹಿತ ಮುದ್ರಾ ರುದ್ರಾಭಿಷೇಕ, ಚಮಕ ಸಹಿತ ರುದ್ರಾಭಿಷೇಕಗಳನ್ನು ಮಾಡಲಾಗುತ್ತಿದೆ. ಶ್ರಿ ಸಿದ್ದಲಿಂಗ ಸ್ವಾಮೀಜಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಳಗಿನಿಂದಲೆ ಶ್ರೀಮಠಕ್ಕೆ ಭಕ್ತರ ದಂಡು ಆಗಮಿಸ್ತಿದೆ. 11 ಗಂಟೆ ವೇಳೆಗೆ ಮಠದ ಅವರಣದಲ್ಲೇ ಸರಳವಾದ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಪಶುಸಂಗೋಪನಾ ಸಚಿವರಾದ ಪ್ರತಾಪ್‍ಚಂದ್ರ ಸಾರಂಗಿ ಮತ್ತು ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಸಂಪೂರ್ಣ ಕಾರ್ಯಕ್ರಮ ಕೊರೊನಾ ನಿಯಮದಂತೆ ರೂಪಿಸಲಾಗಿದ್ದು, ಭಕ್ತರು ಜಾಗರೂಕತೆಯಿಂದ ಇರಬೇಕೆಂದು ಸಿದ್ದಲಿಂಗ ಸ್ವಾಮೀಜಿಗಳು ಭಕ್ತರಿಗ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *