ಶ್ರೀಲಂಕಾದಲ್ಲಿ ಬುರ್ಖಾ ಬ್ಯಾನ್, ಮದರಸಾ ಬಂದ್

ಶ್ರೀಲಂಕಾ: ಬುರ್ಖಾ ಹಾಗೂ ಸಾವಿರಕ್ಕೂ ಹೆಚ್ಚು ಮದರಸಾಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಶ್ರೀಲಂಕಾ ಸರ್ಕಾರ ಮುಂದಾಗಿದೆ.

ದೇಶದ ಭದ್ರತೆಯ ದೃಷ್ಟಿಯಿಂದ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಿಸಲಾಗುತ್ತಿದೆ. ಈ ಕುರಿತ ವಿಧೇಯಕಕ್ಕೆ ಸಹಿ ಹಾಕಿರುವ ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಸೇಖರ್ ಕ್ಯಾಬಿನೇಟ್ ಅನುಮೋದನೆಗೆ ಕಳುಹಿಸಿದ್ದಾರೆ.

ಬುರ್ಖಾ ದೇಶದ ಭದ್ರತೆಗೆ ಸವಾಲಾಗಿದೆ. 2019ರಲ್ಲಿ ಚರ್ಚ್ ಮೇಲಿನ ಉಗ್ರರ ದಾಳಿಯಲ್ಲಿ 250 ಮದಿ ಸಾವನ್ನಪ್ಪಿದ್ದರು. ಈ ಬಳಿಕ ಲಂಕಾದಲ್ಲಿ ಬುರ್ಖಾ ನಿಷೇಧದ ಕೂಗು ಹೆಚ್ಚಾಗಿತ್ತು. ಯಾರು ಬೇಕಾದರೂ ಶಾಲೆಯನ್ನು ತೆರೆದು ಮಕ್ಕಳಿಗೆ ಏನೂ ಬೇಕಾದರೂ ಕಲಿಸಲು ಸಾಧ್ಯವಿಲ್ಲ. ಶಿಕ್ಷಣ ನೀತಿಯನ್ನು ಉಲ್ಲಂಘಿಸುತ್ತಿರುವ ಇಸ್ಲಾಮಿಕ್ ಮದರಾಸಗಳನ್ನು ಮುಚ್ಚಲು ನಿರ್ಧರಿಸಿದೆ. ಶ್ರೀಲಂಕಾದಲ್ಲಿರುವ ಶಿಕ್ಷಣ ನೀತಿಯನ್ನು ಪಾಲಿಸಬೇಕು ಎಂದು ವೀರಶೇಖರ್ ಹೇಳಿದ್ದಾರೆ. ಲಂಕಾ ಸರ್ಕಾರದ ಈ ನಿರ್ಧಾರಕ್ಕೆ ಇಸ್ಲಾಂ ಸಮುದಾಯ ವಿರೋಧ ವ್ಯಕ್ತಪಡಿಸಿದೆ.

ಬುರ್ಖಾಗೆ ನಿಷೇಧ ಹೇರಲು ಲಂಕಾ ಸರ್ಕಾರ ಹೊರಟಿದೆ. ಸರ್ಕಾರ ಸಾವಿರಕ್ಕೂ ಹೆಚ್ಚು ಮದರಸಾಗಳನ್ನೂ ನಿಷೇಧಿಸಲಿದೆ. ಇವುಗಳು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲಂಘಿಸುತ್ತಿವೆ ಎಂದು ವೀರಶೇಖರ್ ದೂರಿದ್ದಾರೆ.

Comments

Leave a Reply

Your email address will not be published. Required fields are marked *