ಶ್ರದ್ಧಾಂಜಲಿ ವಾಹನಕ್ಕೆ ಹಸಿರು ನಿಶಾನೆ

ಬೆಂಗಳೂರು: ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಂದು ಶ್ರದ್ಧಾಂಜಲಿ ವಾಹನಕ್ಕೆ ಹಸಿರು ನಿಶಾನೆ ತೋರಿದರು. ಆಡಳಿತಗಾರರು ಹಾಗೂ ಆಯುಕ್ತರು ಅವರಿಂದ ಶ್ರದ್ಧಾಂಜಲಿ ವಾಹನಗಳಿಗೆ ಹಸಿರು ನಿಶಾನೆ ತೋರಲಾಯ್ತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ ನಾಗರಿಕರ ಅನುಕೂಲಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘದ ವತಿಯಿಂದ 2 ಶ್ರದ್ಧಾಂಜಲಿ ವಾಹನಗಳನ್ನು ಪಾಲಿಕೆಗೆ ನೀಡುತ್ತಿದೆ. ಈ ವಾಹನಗಳಿಗೆ ಆಡಳಿತಗಾರರು ಗೌರವ್ ಗುಪ್ತಾ ಹಾಗೂ ಆಯುಕ್ತರು ಎನ್.ಮಂಜುನಾಥ್ ಪ್ರಸಾದ್ ರವರು ಹಸಿರು ನಿಶಾನೆ ತೋರಿಸಿದರು.

ಈ ವೇಳೆ ವಿಶೇಷ ಆಯುಕ್ತರುಗಳಾದ ಮನೋಜ್ ಜೈನ್, ಜೆ.ಮಂಜುನಾಥ್, ಬಸವರಾಜು, ರಾಜೇಂದ್ರ ಚೋಳನ್, ತುಳಸಿ ಮದ್ದಿನೇನಿ, ರವೀಂದ್ರ, ಉಪ ಆಯುಕ್ತರು(ಆಡಳಿತ) ಲಿಂಗಮೂರ್ತಿ, ಸಹಾಯಕ ಆಯುಕ್ತರು(ಆಸ್ತಿಗಳು) ಹರೀಶ್ ನಾಯ್ಕ್, ಪೂರ್ವ ವಲಯದ ಜಂಟಿ ಆಯುಕ್ತರು ಪಲ್ಲವಿ, ಇಂಜಿನಿಯರ್ ವಿಭಾಗದ ಮುಖ್ಯಸ್ಥರು ಎಂ.ಆರ್.ವೆಂಕಟೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *