ಶೋಕಾಸ್ ನೋಟಿಸ್ – ‘ನ ದೈನಂ ನ ಪಲಾಯನಮ್’ ಅಂದ್ರು ಯತ್ನಾಳ್

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ‘ನ ದೈನಂ ನ ಪಲಾಯನಮ್’ ಎಂದು ಪೋಸ್ಟ್ ಮಾಡಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್‍ರವರು ವಾಗ್ದಾಳಿಯ ಸುರಿಮಳೆಯನ್ನೇ ಸುರಿಸಿದ್ದರು. ಅಲ್ಲದೆ ಡಿಸೆಂಬರ್, ಜನವರಿ ಎರಡು ತಿಂಗಳಿನಲ್ಲಿಯೇ ಸಿಎಂ ಯಡ್ಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ. ಬೇರೆಯವರು ನೂತನ ಸಿಎಂ ಆಗುತ್ತಾರೆ ಎಂದೆಲ್ಲಾ ಹೇಳಿಕೆ ನೀಡಿದ್ದರು.

ಇಷ್ಟೆಲ್ಲಾ ಹೇಳಿಕೆ ಬಳಿಕ ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಹೀಗಿದ್ದರೂ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸತ್ಯಮೇವ ಜಯತೆ, ನ ದೈನಂ ನ ಪಲಾಯನಮ್ ಎಂದು ಪೋಸ್ಟ್ ಮಾಡಿದ್ದಾರೆ.

????ಸತ್ಯ ಮೇವ ಜಯತೆ ????????

????सत्य मेव जयते

???? ನ ಧೈನಂ ನ ಪಲಾಯನಮ್????

???? न घैनं न पलायनम????

Posted by B R Patil Yatnal on Friday, February 12, 2021

ಸತ್ಯ ಗೆದ್ದೇ ಗೆಲ್ಲುತ್ತೆ, ಇದರಿಂದ ಪಲಾಯನ ಆಗುವ ಪ್ರಶ್ನೆಯೇ ಇಲ್ಲ ಎಂದು ಪೋಸ್ಟ್ ಮಾಡಿ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಇದರಿಂದ ಮತ್ತಷ್ಟು ಬಿಜೆಪಿಯಲ್ಲಿ ಸಂಚಲನ ಮೂಡಿದ್ದು, ಯತ್ನಾಳ್ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.

Comments

Leave a Reply

Your email address will not be published. Required fields are marked *