ಶುಭಾ ಪೂಂಜಾ ಮನೆಯಲ್ಲಿ ನಿಧಿ ಸುಬ್ಬಯ್ಯ ಮೋಜು, ಮಸ್ತಿ

Shubha Poonja

ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮದ ನಂತರ ಮೊದಲ ಬಾರಿಗೆ ಸ್ಯಾಂಡಲ್‍ವುಡ್ ನಟಿ ನಿಧಿ ಸುಬ್ಬಯ್ಯ ಹಾಗೂ ಅವರ ತಾಯಿ, ನಟಿ ಶುಭಾ ಪೂಂಜಾ ಮನೆಗೆ ಭೇಟಿ ನೀಡಿದರು.

Shubha Poonja

ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ತಮ್ಮ ತರ್ಲೆ, ಚೇಷ್ಟೆ ಮತ್ತು ಕೋಳಿ ಜಗಳ ಮೂಲಕವೇ ನಿಧಿ ಹಾಗೂ ಶುಭಾ ಪ್ರೇಕ್ಷಕರಿಗೆ ನಗುವಿನ ಕಚಗುಳಿ ನೀಡುವ ಮೂಲಕ ಮನೆಮಾತಗಿದ್ದರು. ಎಷ್ಟೇ ಜಗಳ ಆಡಿದರೂ ಮತ್ತೆ ಕುಚುಕು ದೋಸ್ತಿಗಳಂತ್ತಿದ್ದ ಇವರು ಬಿಗ್‍ಬಾಸ್ ಮನೆಯಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಅಷ್ಟೇ ಬೆಸ್ಟ್ ಫ್ರೆಂಡ್ಸ್. ಇಷ್ಟು ದಿನ ಹಲವು ಕಾರ್ಯಕ್ರಮಗಳಲ್ಲಿ ನಿಧಿ ಹಾಗೂ ಶುಭ ಒಟ್ಟಿಗೆ ಕಾಣಿಸಿಕೊಂಡಿದ್ದರು, ವೈಯಕ್ತಿಕವಾಗಿ ಭೇಟಿ ಮಾಡಿ ಎಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.

ಇದೀಗ ಶುಭ ಪೂಂಜಾ ಮನೆಗೆ ನಿಧಿ ಸುಬ್ಬಯ್ಯ ಹಾಗೂ ಅವರ ತಾಯಿ ಭೇಟಿ ನೀಡಿ ಸಮಯ ಕಳೆದಿದ್ದಾರೆ. ಸದ್ಯ ಈ ಫೋಟೋಗಳನ್ನು ಶುಭಾ ಪೂಂಜಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಶುಭಾ ಪೂಂಜಾ, ಅವರ ತಾಯಿ, ತಂದೆ, ನಿಧಿ ಸುಬ್ಬಯ್ಯ ಹಾಗೂ ಅವರ ತಾಯಿ ಇರುವುದನ್ನು ನೋಡಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ಕೊನೆಗೂ ನನ್ನ ತಾಯಿ ಹಾಗೂ ನಿಧಿ ಸುಬ್ಬಯ್ಯ ಅವರ ತಾಯಿ ಭೇಟಿಯಾದರು ಮತ್ತು ಇತಿಹಾಸದಲ್ಲಿಯೇ ಮೊದಲ ಬಾರಿಗೆ ನನ್ನ ತಂದೆ ಸೆಲ್ಫಿಗೆ ಪೋಸ್ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by shubha Poonja . (@shubhapoonja)

ವಿಶೇಷವೆಂದರೆ ಈ ಪೋಸ್ಟ್‌ಗೆ ನಿಧಿ ಸುಬ್ಬಯ್ಯ ನನ್ನನ್ನು ಕ್ರಾಪ್ ಮಾಡದೇ ಫೋಟೋ ಹಾಕಿದ್ದಕ್ಕೆ ಧನ್ಯವಾದಗಳು ಎಂದು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *