ಶುಕ್ರವಾರ ದಿನಪೂರ್ತಿ ಮುನಿರತ್ನ ಪರ ದರ್ಶನ್‌ ಪ್ರಚಾರ, ರೋಡ್‌ ಶೋ

ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಅವರು ಶುಕ್ರವಾರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ ದರ್ಶನ್‌ ರೋಡ್ ಶೋ ಆರಂಭವಾಗಲಿದ್ದು, ಮುನಿರತ್ನ ಪರ ಇಡೀ ದಿನ ರೋಡ್ ಶೋ‌ ನಡೆಸಿ ದರ್ಶನ್ ಮತಯಾಚಿಸಲಿದ್ದಾರೆ.

 

ಆರಂಭದಲ್ಲಿ ಜೆಪಿ ಪಾರ್ಕ್, ಜಾಲಹಳ್ಳಿ, ಎಚ್ ಎಂಟಿ ವಾರ್ಡ್, ಪೀಣ್ಯಾ, ಗೊರಗುಂಟೆ ಪಾಳ್ಯಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಭೋಜನದ ಬಳಿಕ ಲಕ್ಷ್ಮಿದೇವಿನಗರ, ಲಗ್ಗೆರೆ, ಕೊಟ್ಟಿಗೆ ಪಾಳ್ಯ, ಜ್ಞಾನಭಾರತಿ ವಾರ್ಡ್ ಗಳಲ್ಲಿ ದರ್ಶನ್ ರೋಡ್ ಶೋ ಮಾಡಲಿದ್ದಾರೆ.

ಬುಧವಾರ ದಕ್ಷಿಣ ಭಾರತದ ಪ್ರಖ್ಯಾತ ಚಿತ್ರನಟಿ, ಬಿಜೆಪಿ ನಾಯಕಿ ಖುಷ್ಬೂ ಅಬ್ಬರದ ರೋಡ್ ಶೋ ನಡೆಸಿ ಮುನಿರತ್ನ ಪರ ಮತಯಾಚಿಸಿದ್ದರು.

Comments

Leave a Reply

Your email address will not be published. Required fields are marked *