ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋಸೀಟ್’ ಚಿತ್ರದ ಅತಿ ಚೆಂದದ ಲಿರಿಕಲ್ ವಿಡಿಯೋ ಹಾಡಿನ ಕಚಗುಳಿ ಶುರು

‘ವಿಂಡೋಸೀಟ್’ ಚಿತ್ರದ “ಅತಿಚೆಂದದ ಹೂಗೊಂಚಲು ಕಿಟಕಿಯಾಚೆ ಕಂಡ ಹಾಗಿದೆ” ಹ್ಯಾಂಡ್ ಮೇಡ್ ಪೇಂಟಿಂಗ್ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ, ಫಸ್ಟ್ ಲುಕ್ ವಿಡಿಯೋ ತುಣುಕಿನಲ್ಲಿ ಈ ಹಾಡಿನ ಸಾಲು ಎಲ್ಲರ ಮನಸ್ಸಿಗೂ ಪ್ರಿಯವಾಗಿತ್ತು. ಯಾವಾಗ ಈ ಹಾಡು ಬಿಡುಗಡೆಯಾಗುತ್ತದೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ರು. ಇದೀಗ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಾಂಗ್ ‘ವಿಂಡೋಸೀಟ್’ ಚಿತ್ರತಂಡ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡುತ್ತಿದೆ. ಎಲ್ಲರ ಬಾಯಲ್ಲೂ ಈಗ ಈ ಹಾಡಿನದ್ದೆ ಸಾಲುಗಳು ಗುನುಕೋಕೆ ಶುರುವಾಗಿದೆ. ಅಷ್ಟೇ ಅಲ್ಲ ಬಿಡುಗಡೆಯಾದ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ವಿಕಟ ಕವಿ ಯೋಗರಾಜ್ ಭಟ್ ಸಾಹಿತ್ಯ, ಸ್ವರಮಾಂತ್ರಿಕ ವಿಜಯ್ ಪ್ರಕಾಶ್ ಕಂಠ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್ ಈ ಮೂವರು ಜೊತೆಯಾದ್ರೆ ಅಲ್ಲೊಂದು ರೆಕಾರ್ಡ್ ಕ್ರಿಯೇಟ್ ಆಗೋದು ಪಕ್ಕಾ. ಇದೀಗ ಈ ಮೂವರ ಕಾಂಬೀನೇಷನ್ ‘ವಿಂಡೋಸೀಟ್’ನ ಅತಿಚೆಂದದ ಹಾಡಿನಲ್ಲಿ ಎಲ್ಲರ ಮನಸೂರೆ ಮಾಡಿದೆ. ಎಲ್ಲರ ಮನಸಿಗೂ ಹಾಡು ಆವರಿಸಿದೆ. ಕೇಳುಗ ಪ್ರಿಯರು ರಿಪೀಟ್ ಮೂಡ್ ನಲ್ಲಿ ಮತ್ತೆ ಮತ್ತೆ ಹಾಡು ಕೇಳೋಕೆ ಶುರುಮಾಡಿಕೊಂಡಿದ್ದಾರೆ.

ಯೋಗರಾಜ್ ಭಟ್ ಸಾಹಿತ್ಯ ಕೃಷಿಗೆ ಬೆರೆತ ಅರ್ಜುನ್ ಜನ್ಯ ಸಂಗೀತ, ವಿಜಯ್ ಪ್ರಕಾಶ್ ಇಂಪಾದ ದನಿ ಒಂದಕ್ಕೊಂದು ಹದವಾಗಿ ಪೋಣಿಸಿದಂತಿದೆ. ಶೀತಲ್ ಶೆಟ್ಟಿ ನಿರ್ದೇಶನದ `ವಿಂಡೋಸೀಟ್’ ಚಿತ್ರ ಆರಂಭದಿಂದಲೂ ಸದಾ ಸುದ್ದಿಯಲ್ಲಿದ್ದು ಇದೀಗ ಚಿತ್ರದ ಮೋಸ್ಟ್ ಎಕ್ಸ್ ಪೆಕ್ಟಡ್ ಹಾಡಿನ ಮೂಲಕ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿದೆ. ನಿರೂಪ್ ಭಂಡಾರಿ ನಾಯಕ ನಟನಾಗಿ ನಟಿಸಿರೋ ಈ ಚಿತ್ರದಲ್ಲಿ ಸಂಜನ ಆನಂದ್, ಅಮೃತ ಐಯ್ಯಂಗಾರ್ ನಾಯಕನಟಿಯಾರಾಗಿ ಬಣ್ಣಹಚ್ಚಿದ್ದಾರೆ. ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬರ್ತಿರೋ ‘ವಿಂಡೋಸೀಟ್’ ಚಿತ್ರಕ್ಕೆ ವಿಘ್ನೇಶ್ ರಾಜ್ ಕ್ಯಾಮೆರಾ ಕೈಚೆಳಕವಿದೆ. ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾದಲ್ಲಿ ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

Comments

Leave a Reply

Your email address will not be published. Required fields are marked *