ಶೀಘ್ರ ಸಂಪುಟ ವಿಸ್ತರಣೆ, ಜಾರಕಿಹೊಳಿ,ಮುನಿರತ್ನ ಸಚಿವರಾಗ್ತಾರೆ: ಸಚಿವ ನಾರಾಯಣ ಗೌಡ

ಚಾಮರಾಜನಗರ: ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ರಮೇಶ್ ಜಾರಕಿಹೊಳಿ, ಮುನಿರತ್ನ ಮಂತ್ರಿಯಾಗುತ್ತಾರೆ ಎಂದು ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

 

ಚಾಮರಾಜನಗರದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಖಂಡಿತ ಮಂತ್ರಿಯಾಗುತ್ತಾರೆ. ಅವರ ಬಗ್ಗೆ ನಮಗೆ ಗೌರವವಿದೆ. ಅವರ ಬಗೆಗಿನ ಆರೋಪಗಳು ಕಟ್ಟುಕಥೆಯಾಗಿವೆ ಅವರು ಆರೋಪದಿಂದ ಮುಕ್ತರಾಗುತ್ತಾರೆ ನಾವು ಅವರ ಜೊತೆ ಇರುತ್ತೇವೆ ಎಂದಿದ್ದಾರೆ.

ಬಾಂಬೆ ಟೀಂನಲ್ಲಿದ್ದ ನಾವೆಲ್ಲಾ ಒಟ್ಟಿಗೆ ಇದ್ದೋರು ಈಗಲು ಒಟ್ಟಿಗೆ ಇದ್ದೇವೆ. ಕೆಲವರಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರಬಹುದು ಎಂದ ಅವರು
ಮುಂದಿನ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತೆ, ನಾಯಕತ್ವ ಬದಲಾವಣೆ ಕೇವಲ ಊಹಾಪೋಹ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *