ಶಿರಾದಲ್ಲಿ ಬಿಜೆಪಿಯಿಂದ ಇತಿಹಾಸ ಸೃಷ್ಟಿ – ರಾಜೇಶ್‌ ಗೌಡಗೆ ಜಯ, ಟಿಬಿಜೆಗೆ ಸೋಲು

ತುಮಕೂರು: ಶಿರಾದಲ್ಲಿ ಇದೇ ಮೊದಲ ಬಾರಿಗೆ ಜಯಗಳಿಸುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ರಾಜೇಶ್‌ ಗೌಡ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಟಿಬಿ ಜಯಚಂದ್ರ ಅವರನ್ನು ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ.

ರಾಜೇಶ್‌ಗೌಡ ಅವರು ಆರಂಭದಿಂದಲೂ ಮುನ್ನಡೆಯಲ್ಲಿದ್ದರು. 13ನೇ ಸುತ್ತಿನಲ್ಲಿ 8,471 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದ ರಾಜೇಶ್‌ ಗೌಡ ಅವರ ಅಂತರ 15ನೇ ಸುತ್ತಿನ ಮತ ಎಣಿಕೆಯ ವೇಳೆ 1,765 ಅಂತರಕ್ಕೆ ಕುಸಿದಿತ್ತು. ಹೀಗಾಗಿ ಸ್ಪರ್ಧೆ ತೀವ್ರಗೊಂಡಿತ್ತು.

ನಂತರದ ಸುತ್ತಿನಲ್ಲಿ ರಾಜೇಶ್‌ ಗೌಡ ಅಂತರವನ್ನು ಕಾಯ್ಸುಕೊಂಡ ಪರಿಣಾಮ ಅಂತಿಮವಾಗಿ ಮತಗಳ ಅಂತರದಿಂದ ಜಯಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

2018 ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸತ್ಯನಾರಾಯಣ ಅವರು 74,338 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ 63,973, ಬಿಜೆಪಿ 16,959 ಮತಗಳನ್ನು ಪಡೆದಿತ್ತು.

Comments

Leave a Reply

Your email address will not be published. Required fields are marked *