ಶಾಪ ವಿಮೋಚನೆಗಾಗಿ ಟೆಂಪಲ್ ರನ್ – ಮೈಲಾರಲಿಂಗೇಶ್ವರನಿಗೆ 5 ಬಾರಿ ದೀಡ್ ನಮಸ್ಕಾರ ಹಾಕಿದ್ರು ಡಿಕೆಶಿ

– 1 ಕೆ.ಜಿ ಬೆಳ್ಳಿಯ ಹೆಲಿಕಾಪ್ಟರ್ ಕಾಣಿಕೆಯಾಗಿ ಅರ್ಪಣೆ

ಬಳ್ಳಾರಿ: ಶಾಪ ವಿಮೋಚನೆಗಾಗಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರು ಟೆಂಪಲ್ ರನ್ ಮಾಡಿದ್ದಾರೆ.

ಇಂದು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬಳಿಕ ದೇಗುಲಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ಅನ್ನು ಅರ್ಪಣೆ ಮಾಡಿದ್ದಾರೆ.

ಕಾಣಿಕೆ ಅರ್ಪಿಸಲು ಕಾರಣವೇನು..?
ದೇವಸ್ಥಾನದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ನಲ್ಲಿ ಹಾಯ್ದು ಹೋದವರಿಗೆ ಸಂಕಷ್ಟ ಎದುರಾಗುತ್ತೆ ಎಂಬ ನಂಬಿಕೆ ಇದೆ. ಅದೇ ರೀತಿ 2018ರಲ್ಲಿ ದೇವಸ್ಥಾನದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಹಾಯ್ದು ಹೋಗಿದ್ದರಿಂದ ಹಲವು ಸಂಕಷ್ಟಗಳನ್ನು ಡಿಕೆಶಿ ಎದುರಿಸಿದ್ದರು. ಇಡಿ, ಜೈಲು ವಾಸದಂತಹ ಕಷ್ಟಕ್ಕೆ ಒಳಗಾಗಿದ್ದರು. ಹೀಗಾಗಿ ಕಾರ್ಯಕರ್ತರು ಹಾಗೂ ದೇವಸ್ಥಾನದ ಗುರುಗಳ ಸಲಹೆ ಮೇರೆಗೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಐದು ಬಾರಿ ದೀಡ್ ನಮಸ್ಕಾರ ಹಾಕಿದ ಡಿಕೆಶಿ, ನಂತರ ರುದ್ರಸ್ನಾನ ವಿಧಿ ನೆರವೇರಿಸಿ ಪೂಜೆ ಸಲ್ಲಿಸಿದರು. ಮೈಲಾರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ ಒಂದು ಕೆಜಿಯ ಹೆಲಿಕ್ಯಾಪ್ಟರ್ ನೀಡಿ ಹರಕೆ ತೀರಿಸಿದರು.

Comments

Leave a Reply

Your email address will not be published. Required fields are marked *