ಶಶಿಕಲಾ ಜೊಲ್ಲೆಗೆ ಮಂತ್ರಿ ಸ್ಥಾನ ನೀಡಿರುವುದು ಬೇಸರವಾಗಿದೆ: ಶಾಸಕಿ ಪೂರ್ಣಿಮಾ

ಬೆಂಗಳೂರು: ಮುಖ್ಯಮಂತ್ರಿ ಬೊಮ್ಮಾಯಿಯವರ ಮಂತ್ರಿಮಂಡಲ ರಚನೆಯಾಗಿದ್ದು ಬರೋಬ್ಬರಿ 29 ಮಂದಿ ಶಾಸಕರು ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಕೊನೆ ಕ್ಷಣದವರೆಗೆ ಮಂತ್ರಿ ಆಗುವವರ ಲಿಸ್ಟ್ ನಲ್ಲಿ ಹೆಸರಿದ್ದು, ಕೊನೆಯಲ್ಲಿ ಕೈ ಬಿಟ್ಟಿರುವುದಕ್ಕೆ ಹಿರಿಯೂರಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿ ಸಂಪುಟದಲ್ಲಿ ಖಂಡಿತ ನಾವು ಮಂತ್ರಿ ಆಗುತ್ತೇವೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ. ಹೀಗೆ ನಿರಾಸೆಗೊಳಗಾದವರಲ್ಲಿ ಪೂರ್ಣಿಮಾ ಶ್ರೀನಿವಾಸ್ ಕೂಡ ಒಬ್ಬರು. ಇಂದು ಬೆಂಗಳೂರಿನ ಕೆ.ಆರ್.ಪುರದ ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರದ ಆರೋಪ ಕೇಳಿಬಂದಿರುವ ಶಶಿಕಲಾ ಜೊಲ್ಲೆಗೆ ಮಂತ್ರಿ ಸ್ಥಾನ ನೀಡಿರುವುದು ಬೇಸರವಾಗಿದೆ. ನನಗೆ ಅಲ್ಲದೆ ಬೇರೆ ಮಹಿಳಾ ಶಾಸಕರನ್ನು ಮಂತ್ರಿ ಮಾಡಿದ್ದರೂ ಕೂಡ ಬೇಸರ ಆಗುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ಪ್ರವಾಹ, ಕೋವಿಡ್ ನಿರ್ವಹಣೆಗಾಗಿ ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ

ನಮ್ಮ ಜಿಲ್ಲೆಯಲ್ಲಿ ಹಿರಿಯ ಶಾಸಕರಿದ್ದು ಅವರನ್ನು ಕಡೆಗಣಿಸಲಾಗಿದೆ. ಆರೋಪ ಇರುವಂತಹ ಒಬ್ಬ ಶಾಸಕರಿಗೆ ಸಚಿವ ಸ್ಥಾನ ಯಾಕೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ, ಇದನ್ನು ಪಕ್ಷದವರೇ ಉತ್ತರಿಸಬೇಕು. ರಾಜ್ಯದಲ್ಲಿ ಪ್ರಬಲ ಸಮುದಾಯದ ಏಕೈಕ ಶಾಸಕಿಯಾದ ನನಗೆ ಮಂತ್ರಿ ಸ್ಥಾನ ಕೊಡಬಹುದಿತ್ತು. ನಾನು ಇರುವ ವಾಸ್ತವಿಕ ಅಂಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಸಚಿವ ಸ್ಥಾನ ನನಗೆ ಕೈ ತಪ್ಪಿರುವ ಬಗ್ಗೆ ನಾನು ಯಾರನ್ನು ದೂರುವುದಿಲ್ಲ. ಆದರೆ ನಾನು ಮಾತ್ರ ನನ್ನ ಕ್ಷೇತ್ರದ ಜನರ ಸೇವೆ ಮುಂದುವರೆಸುತ್ತೇನೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *