ಶವ ಸಂಸ್ಕಾರಕ್ಕೆ ಜಾಗ ಸಿಗದೆ ಊರಿಂದ ಊರಿಗೆ ಅಲೆದಾಡಿದ ಕುಟುಂಬಸ್ಥರು

ರಾಂಚಿ: ಕೋವಿಡ್-19 ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವ ಸಂಸ್ಕಾರ ಮಾಡಲು ಸ್ಥಳೀಯರು ಜಾಗ ನೀಡಲು ನಿರಾಕರಿಸಿದ್ದರಿಂದ ಸಾವನ್ನಪ್ಪಿ 24 ಗಂಟೆ ಕಳೆದಿದ್ದರೂ ಶವ ಸಂಸ್ಕಾರಕ್ಕಾಗಿ ಕುಟುಂಬಸ್ಥರು ಶ್ರಳವನ್ನು ಹುಡುಕುತ್ತಿದ್ದ ಘಟನೆ ನಡೆದಿದೆ.

ಇಕ್ಲಾಸಸ್ ಲಕ್ರ (65) ಮೃತರಾಗಿದ್ದಾರೆ. ಜಾಖರ್ಂಡ್ ರಾಜ್ಯದ ಗುಮ್ಲಾ ಜಿಲ್ಲೆಯ ಸಾದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶವ ಸಂಸ್ಕಾರ ಮಾಡಲು ಒಂದು ಊರಿನಿಂದ ಮತ್ತೊಂದು ಊರಿಗೆ ಅಲೆದಾಡಿದ್ದರೂ ಸ್ಥಳೀಯ ಗ್ರಾಮಸ್ಥರು ಕೂಡಾ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಆದ್ದರಿಂದ ಕೊನೆಗೆ ಬಿಷ್ಣುಪುರದ ವಿಭಾಗಧಿಕಾರಿ ಕಚೇರಿ ಬಳಿಗೆ ಶವವನ್ನು ತಂದಿದ್ದು, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಲಕ್ರಾ ಭಾನುವಾರ ಮಧ್ಯಾಹ್ನ 12ಕ್ಕೆ ಮೃತಪಟ್ಟಿದ್ದು, ಶವವನ್ನು ಮೊದಲಿಗೆ ಸಾಂಕ್ರಾಮಿಕದಿಂದ ಮೃತಪಟ್ಟ ಶವ ಸಂಸ್ಕಾರ ಮಾಡುವ ಸ್ಥಳವಾದ ಮುಂದರ್ ಡ್ಯಾಮ್ ಬಳಿಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಶವ ಹೂಳದಂತೆ ಗ್ರಾಮಸ್ಥರು ತಡೆ ನೀಡಿದ್ದಾರೆ.

ನಂತರ ಹತ್ತಿರದಲ್ಲಿದ್ದ ಜೆಹಂಗುಟ್ವಾ ಹಳ್ಳಿಗೆ ಶವವನ್ನು ತೆಗೆದುಕೊಂಡು ಹೋಗಲಾಗಿದೆ. ಅಲ್ಲಿಯೂ ಕೂಡಾ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ತದನಂತರ ಬಹರಾಧಿಪ ಎಂಬ ಹಳ್ಳಿಗೆ ತೆಗೆದುಕೊಂಡು ಹೋದಾಗಲೂ ಅದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಕೊನೆಗೆ ಟ್ರಾಕ್ಟರ್‍ನಲ್ಲಿ ಶವವನ್ನು ತೆಗೆದುಕೊಂಡು ವಿಭಾಗಾಧಿಕಾರಿ ಕಚೇರಿ ಹೊರಗಡೆ ನಿಲ್ಲಿಸಲಾಗಿತ್ತು.

 ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತರಾದ ಸ್ಥಳೀಯ ಆಡಳಿತ ಚೇಡಾ ಹಳ್ಳಿಯಿಂದ ಎರಡು ಕಿಲೋ ಮೀಟರ್ ದೂರಕ್ಕೆ ಶವವನ್ನು ತೆಗೆದುಕೊಂಡು ಹೋದಾಗ ಅಲ್ಲಿಯೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಇದೀಗ ಲಕ್ರಾ ಹುಟ್ಟರೂ ಜೋರಿಗೆ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ.

ಮೃತದೇಹ ಸಂಸ್ಕಾರ ಮಾಡಲು ಊರಿಂದ ಊರಿಗೆ ಅಲೆದಾಡುತ್ತಿದ್ದರೂ ಸ್ಥಳೀಯ ಆಡಳಿತ ಯಾವುದೇ ನೆರವು ನೀಡುತ್ತಿಲ್ಲ. ಆರೋಗ್ಯ ಇಲಾಖೆಯಿಂದ ಕೇವಲ ಪಿಪಿಇ ಕಿಟ್‍ಗಳನ್ನು ನೀಡಿದ್ದಾರೆ ಎಂದು ಲಕ್ರಾ ಕುಟುಂಬಸ್ಥರು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *