ಶರ್ಟ್ ಪ್ಯಾಂಟ್ ಧರಿಸಿ ನಗರ ಸುತ್ತಾಡಿದ ಆನೆ

ಆನೆಯೊಂದು ಶರ್ಟ್ ಪ್ಯಾಂಟ್ ಧರಿಸಿ ಮಾವುತನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಫೋಟೋವನ್ನು ಮಹೇಂದ್ರ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟ್ಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ನಂಬಲಾಗದ ಭಾರತ. ಎಲಿ-ಪಂಟ್ ಎಂದು ಬರೆದುಕೊಂಡಿದ್ದಾರೆ.

ಈ ಫೋಟೋದಲ್ಲಿ ಆನೆ ನೇರಳೆ ಬಣ್ಣದ ಶರ್ಟ್ ಧರಿಸಿ ಅದಕ್ಕೆ ಮ್ಯಾಚ್ ಆಗುವಂತಹ ಪ್ಯಾಂಟ್ ಧರಿಸಿಕೊಂಡು ಮಾವುತನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮೂಲಕ ಜನರ ಗಮನ ಸೆಳೆದಿದೆ.

ಮೈಕ್ರೋ ಬ್ಲಾಗಿಂಗ್‍ನಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆಯೇ ಸುಮಾರು 28,400 ಲೈಕ್ಸ್ ಹಾಗೂ 1,900 ಕಮೆಂಟ್‍ಗಳು ಹರಿದುಬಂದಿದೆ. ಕೆಲವರು ಆನೆ ಡ್ರಸ್‍ನಲ್ಲಿ ಬಹಳ ಮುದ್ದಾಗಿ ಕಾಣಿಸಿಕೊಂಡಿದೆ ಎಂದರೆ ಇನ್ನೂ ಕೆಲವರು ಆನೆ ವಿಚಿತ್ರವಾಗಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

10 ಮಂದಿ ಟೈಲರ್‍ ಗಳು ಆನೆ ಅಳತೆಯನ್ನು ತೆಗೆದುಕೊಂಡು ಪ್ಯಾಂಟ್ ಹೊಲಿದಿರಬೇಕು ಮತ್ತೊಬ್ಬರು ಹಾಸ್ಯಮಯವಾಗಿ ಕಮೆಂಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *