ಶಮಂತ್ ಕೂದಲಿನ ಕತೆ, ಗೋವಿಂದಾ ಗೋವಿಂದಾ…

ಬಿಗ್‍ಬಾಸ್ ಮನೆಯಲ್ಲಿ ಕೇಶಮುಂಡನ ಕಾರ್ಯ ನಡೆಯುತ್ತಿದೆ. ಶಮಂತ್ ಗೌಡಾ ಅವರ ಕೂದಲನ್ನು ಮಂಜು ತೆಗೆಯುತ್ತಿದ್ದಾರೆ. ಇದನ್ನು ನೋಡಿದ ಮನೆ ಮಂದಿ ಸಖತ್ ಮಜಾ ತೆಗೆದುಕೊಳ್ಳುತ್ತಿದ್ದಾರೆ.

ಶಮಂತ್ ತಮ್ಮ ಕೂದಲೂ ಹಾಗೂ ಗಡ್ಡ ಮೂಲಕವಾಗಿಯೇ ಇಲ್ಲರ ಗಮನವನ್ನು ಸೆಳೆಯುತ್ತಿದ್ದರು. ಮನೆ ಮಂದಿಗೆ ಮಾತ್ರವಲ್ಲದೆ ಅಭಿಮಾನಿಗಳಿಗೂ ಶಮಂತ್ ಅವರ ಕೂದಲಿನ ಮೇಲೆ ಒಂದು ಕಣ್ಣು ಇತ್ತು ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಇದೀಗ ಶಮಂತ್ ಅವರ ಕೂದಲಿಗೆ ಕತ್ತರಿಯನ್ನು ಹಾಕಿದ್ದಾರೆ.

ಶಮಂತ್ ಅವರ ಕೂದನ್ನು ಮಂಜು ಪಾವಗಡ ಕತ್ತರಿಸುತ್ತಿದ್ದಾರೆ. ಇದನ್ನು ಗಮನಿಸಿದ ಶುಭ ಗೊತ್ತು.. ಗಿತ್ತು ಎಂದೆ ನೀನು ಪೂರ್ತಿ ಕೂದಲನ್ನೇ ತೆಗೆದು ಹಾಕುತ್ತಿಯಾ ಎಂದು ಶುಭಾ ಪೂಂಜಾ ಹೇಳಿದ್ದಾರೆ. ಈ ವೇಳೆ ಮಂಜು ಕೂದಲು ಕಟ್ ಮಾಡಿಸಿಕೊಳ್ಳುವವನೇ ಸುಮ್ಮನೇ ಇದ್ದಾನೆ. ನಿಮ್ಮದೇನು? ಎಂದು ತಮಾಷೆ ಮಾಡಿದ್ದಾರೆ. ನಿಜ ಹೇಳಬೇಕು ಅಂದ್ರೆ ಇದು ನನಗೂ ಹೊಸ ಕೆಲಸ ಎಂದು ಹೇಳುತ್ತಾ ಮಂಜು ನಗೆ ಚಟಾಕೆಯನ್ನು ಹಾರಿಸಿದ್ದಾರೆ.

ಒಂದು ಗಂಟೆಯಲ್ಲಿ ಶಮಂತ್ ಮಶ್ರೂಮ್ ಆಗಿದ್ದಾನೆ ಎಂದು ಅರವಿಂದ್ ಹೇಳಿದ್ದಾರೆ. ಮಂಜು ಕತ್ತರಿಸುವುದನ್ನು ನೋಡುತ್ತಾ ಶಮಂತ್ ಸಖತ್ ಭಯಗೊಂಡಿದ್ದರು. ಆದರೆ ಮಂಜು ಮಾತ್ರ ಧೈರ್ಯವಾಗಿ ಕೂದಲು ಕಟ್ ಮಾಡುತ್ತಿದ್ದರು. ಈ ವೇಳೆ ಗಾರ್ಡನ್ ಏರಿಯಾದಲ್ಲಿ ಇದ್ದ ಮನೆಯ ಮಂದಿ ಸಖತ್ ಆಗಿದೆ.. ಸಖತ್ ಆಗಿದೆ ಎಂದು ಹೇಳುತ್ತಾ ಜೋರಾಗಿ ನಕ್ಕಿದ್ದಾರೆ.

ನಾನು ತುಂಬಾ ಇಷ್ಟ ಪಡುವಂತ ಕೂದನ್ನು ನಿಮ್ಮನ್ನು ನಂಬಿ ನಿಮ್ಮ ಕೈಗೆ ಕೊಟ್ಟಿದ್ದೆ, ನೀವು ಚೆನ್ನಾಗೆ ಮಾಡಿಕೊಟ್ಟಿದ್ದಿರಾ ಎಂದು ಶಮಂತ್ ಮಂಜುಗೆ ಧನ್ಯವಾದವನ್ನು ಹೇಳಿದ್ದಾರೆ. ಈ ವೇಳೆ ಮಂಜು ಮಗಾ ಯಾರ ಏನ್ ಹೇಳಿದರೂ ತಲೆ ಕೇಡಿಸಿಕೊಳ್ಳ ಬೇಡಾ ಸಖತ್ ಆಗಿ ಕಾಣಿಸಿಕೊಳ್ಳುತ್ತಿದ್ದಿಯಾ ಎಂದು ಮಂಜು ಹೇಳಿದ್ದಾರೆ. ಈ ವೇಳೆ ಹೌದು ಶಮಂತ್ ಚೆನ್ನಾಗಿ ಕಾಡುತ್ತಿದ್ದೀಯಾ ಎಂದು ದಿವ್ಯಾ ಸುರೇಶ್ ಕೂಡಾ ಹೇಳಿದ್ದಾರೆ.

ಹೊಸ ಹೇರ್ ಸ್ಟೈಲ್‍ನಲ್ಲಿ ಶಮಂತ್ ಸಖತ್ ಆಗಿ ಕಾಣುತ್ತಿದ್ದಾರೆ. ಹೊಸ ಲುಕ್ ನಲ್ಲಿ ಶಮಂತ್ ಅವರು ಎನೋ ಹೊಸ ಮೋಡಿಯನ್ನು ಮಾಡಲಿದ್ದಾರೆ ಎಂಬುದು ಮಾತ್ರ ಸತ್ಯ. ಶಂತ್ ಅವರ ಹೊಸ ಲುಕ್‍ಗೆ ಮನೆ ಮಂದಿ ಮಾತ್ರ ಫಿದಾ ಆಗಿದ್ದಾರೆ.

Comments

Leave a Reply

Your email address will not be published. Required fields are marked *