ಶಮಂತ್ ಎಮೋಷನಲ್ ಡೈಲಾಗ್ ಕೇಳಿ ಸಂಕಷ್ಟಕ್ಕೆ ಸಿಲುಕಿಕೊಂಡ ಮನೆ ಮಂದಿ

ಬಿಗ್‍ಬಾಸ್ ಮನೆಯ ಎಲ್ಲ ಸದಸ್ಯರು ಒಂದೆ ಧ್ವನಿಯಲ್ಲಿ ಬಿಗ್‍ಬಾಸ್ ಶಮಂತ್ ಅವರನ್ನು ಮನೆಯಿಂದ ಕರೆದುಕೊಂಡು ಹೋಗಿ ಎಂದು ಸಾಷ್ಟಾಂಗನಮಸ್ಕಾರ ಹಾಕಿದ್ದಾರೆ. ನೀವು ಒಪ್ಪುವವರೆಗೆ ನಾವು ಎದ್ದು ಹೋಗಲ್ಲಾ ಬಿಗ್‍ಬಾಸ್ ಎಂದಿದ್ದಾರೆ.

ಹೌದು. ಬಿಗ್‍ಬಾಸ್ ಮನೆಯ ಎದುರು ಮನೆ ಮಂದಿ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ. ಶಮಂತ್ ಅವರನ್ನು ಇಲ್ಲಿಂದ ಕರೆದುಕೊಂಡು ಹೋಗಿ ನಮಗೆ ಬೆಡ್ ರೂಮ್ ಕೊಡಿ ಎಂದು ಕ್ಯಾಮೆರಾ ಮುಂದೆ ಬಂದು ಸದಸ್ಯರು ಕೈ ಮುಗಿದು ಅಡ್ಡಬಿದ್ದಿದ್ದಾರೆ. ಬಿಗ್‍ಬಾಸ್ ಉತ್ತರಕ್ಕಾಗಿ ಕೊಂಚ ಸಮಯ ಕಾದಿದ್ದಾರೆ. ಆದರೆ ಯಾವುದು ಉತ್ತರ ಬರದೆ ಗಂಟೆಯ ಸೌಂಡ್ ಬಂದಿದೆ.

ಶಮಂತ್ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ!

ಶಮಂತ್ ಮೈಕ್‍ನಲ್ಲಿ ಧ್ವನಿ ಕೇಳುವಂತೆ ಮಾತನಾಡದೆ ಕಿವಿಯಲ್ಲಿ ಹೋಗಿ ಕೆಲವೊಮ್ಮೆ ಮಾತನಾಡುತ್ತಾರೆ. ಬಿಗ್‍ಬಾಸ್ ಮನೆಯ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಈ ವಿಚಾರವಾಗಿ ಅವರಿಗೆ ಶಿಕ್ಷೆಯನ್ನು ವಿಧಿಸಲಾಗಿತ್ತು.

ಶಮಂತ್ ಮೂರನೇ ವಾರದ ನಾಮಿನೇಶನ್‍ಗೆ ನೇರವಾಗಿ ನಾಮಿನೇಟ್ ಆಗುತ್ತಾರೆ. ಅವರು ನಾಮಿನೇಟ್ ಆಗಬಾರದು ಎಂದರೆ ಮನೆ ಮಂದಿ ಬೆಡ್‍ರೂಂ ಏರಿಯಾವನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದರು. ಕೆಲವರು ವಿರೋಧ ವ್ಯಕ್ತಪಡಿಸಿದರು ಕೆಲವರು ಒಪ್ಪಿದರು. ಈ ವೇಳೆ ಶಮಂತ್ ನಮ್ಮ ಅಪ್ಪ ಅಮ್ಮಾ ಉಸಿರಾಡ್ತಿರೋದೆ ನನ್ನ ಹೆಸರಿನಿಂದ ಎಂದು ಭಾವುಕರಾದರು. ಈ ವೇಳೆ ಮನೆ ಮಂದಿ ಬೆಡ್ ರೂಂ ಬಿಡಲು ಒಪ್ಪಿಗೆ ಸೂಚಿಸಿದರು.

ಸಂಕಷ್ಟಕ್ಕೆ ಸಿಲುಕಿಕೊಂಡರಾ ಸೆಲೆಬ್ರಿಟಿಗಳು!

ಬೆಡ್ ರೂಂ ಬಿಟ್ಟುಕೊಟ್ಟಿರುವ ಕುರಿತಾಗಿ ಕೆಲವರಿಗೆ ಬೇಸರವಾಯಿತ್ತು. ಶಮಂತ್ ಉಳಿಸಲು ಹೋಗಿ ಈಗ ಮನೆಮಂದಿ ಲಿವಿಂಗ್ ಏರಿಯಾದಲ್ಲಿ ಉಳಿದುಕೊಳ್ಳುವಂತಾಗಿದೆ. ಯಾರಿಗೂ ಸರಿಯಾಗಿ ನಿದ್ದೆ ಬಂದಿಲ್ಲ. ಬೆಡ್ ಇಲ್ಲದೆ ಮಲಗಬೇಕು ಎನ್ನುವ ಕೋಪದಲ್ಲಿ ಮನೆ ಮಂದಿ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡ ತೊಡಗಿದರು. ಗಾರ್ಡ್‍ನ್ ಏರಿಯಾ ಹಾಗೂ ಲಿವಿಂಗ್ ಏರಿಯಾದಲ್ಲಿ ಮಲಗಿದ್ದರು.

ಶಮಂತ್ ನಾ ಕರೆದುಕೊಂಡು ಹೋಗಿ!

ಮನೆಮಂದಿ ಎಲ್ಲಾ ಸೇರಿ ಒಂದು ಕ್ಯಾಮೆರಾ ಮುಂದೆ ಬಂದು ಬಿಗ್‍ಬಾಸ್ ಆತುರದ ನಿಧಾರವನ್ನು ತೆಗೆದುಕೊಂಡೆವು. ದಯವಿಟ್ಟು ಹೀಗೆ ಮಾಡುವುದಿಲ್ಲ. ನಮೆ ಬೆಡ್ ರೂಂ ಕೋಡಿ .ಬೇರೆ ಯಾವುದಾದರೂ ಶಿಕ್ಷೆಯನ್ನು ನೀಡಿ ಇಲ್ಲವಾದರೆ ಶಮಂತ್‍ನನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ.

2 ನೇವಾರದ ಎಲಿಮಿನೇಷನ್‍ಯಲ್ಲೊಬ್ಬ ಸ್ಪರ್ಧಿ ಮನೆಯಿಂದ ಆಚೆ ಹೋಗಿದ್ದಾರೆ. ಮೂರನೇವಾರವು ನಾವು ಸೇಫ್ ಆಗಬೇಕು ಎಂದು ಪ್ರತಿಯೊಬ್ಬರು ತಮ್ಮನ್ನು ತಾವು ಬಚಾವ್ ಮಾಡಿಕೊಳ್ಳುವ ಆಟವನ್ನು ಪ್ರಾರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *