ವೀಡಿಯೋ ವೈರಲ್-ಗರ್ಭಿಣಿ ಅಧಿಕಾರಿಯಿಂದ ಜನರಿಗೆ ಕೋವಿಡ್ ಪಾಠ

ಚತ್ತೀಸ್‍ಗಢ: ಸೋಂಕಿನ ನಿಯಂತ್ರಣಕ್ಕೆ ಕೊರೊನಾ ವಾರಿಯರ್ಸ್‍ಗಳು ತಮ್ಮ ಜೀವ ಪಣಕ್ಕಿಟ್ಟು ಹಗಲು ರಾತ್ರಿ ಕಷ್ಟ ಪಡುತ್ತಿದ್ದು, ಎಚ್ಚರಿಕೆ ಮೂಡಿಸುತ್ತಲೇ ಇದ್ದಾರೆ. ಇದೇ ರೀತಿ ಬಸ್ತಾರ್‍ನ ದಂತೇವಾಡದ ಡಿಎಸ್‍ಪಿ ಗರ್ಭಿಣಿಯಾಗಿದ್ದರೂ ಸುಡುವ ಬಿಸಿಲಿನಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಗಾಗಿ ರಸ್ತೆಗಿಳಿದು ಜಾಗೃತಿ ಮೂಡಿಸುತ್ತಿದ್ದಾರೆ.

ಛತ್ತೀಸ್‍ಗಢದ ದಂತೇವಾಡದ ಡಿಎಸ್‍ಪಿ ಶಿಲ್ಪಾ ಸಾಹು ಗರ್ಭಿಣಿಯಾಗಿದ್ದರು ಸುಡು ಬಿಸಿಲಿನಲ್ಲಿ ರಸ್ತೆಯಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಿಗೆ ತಿಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾ ವಾರಿಯರ್ ಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣ ಲೆಕ್ಕಿಸದೇ ಕೆಲಸ ಮಾಡುತ್ತಿರುವ ಈ ಹೊತ್ತಿನಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂಬುದನ್ನು ಈ ವೀಡಿಯೋ ಹೇಳುತ್ತಿದೆ.

ಕೊರೊನಾ ಸೋಂಕಿನಿಂದ ಸಾಮಾನ್ಯ ಜನರ ರಕ್ಷಣೆಗೆ ಕೊರೊನಾ ವಾರಿಯರ್‍ಗಳು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಕೋವಿಡ್‍ನ ಈ ಸಂದರ್ಭದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವುದು ಅತ್ಯಗತ್ಯವಾಗಿದೆ. ಜನರು ಈ ಬಗ್ಗೆ ನಿರ್ಲಕ್ಷ್ಯವಹಿಸದೆ ಸ್ವಯಂ ಪ್ರೇರಿತವಾಗಿ ಕೋವಿಡ್ ನಿಯಮಾವಳಿ ಪಾಲನೆ ಮಾಡುವುದು ಅಗತ್ಯವಾಗಿದೆ ಎಂದು ಗರ್ಭಿಣಿ ಅಧಿಕಾರಿ ಕೆಲಸವನ್ನು ಮೆಚ್ಚಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *