ವೀಡಿಯೋದಲ್ಲಿ ಜಾರಕಿಹೊಳಿ ಕತ್ತಲ್ಲಿದ್ದ ಮಚ್ಚೆ ಇಲ್ಲ: ಮಹೇಶ್ ಕುಮಟಳ್ಳಿ

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋದಲ್ಲಿ ರಮೇಶ್ ಜಾರಕಿಹೊಳಿ ಕತ್ತಿನಲ್ಲಿರುವ ಮಚ್ಚೆ ಕಾಣಿಸುತ್ತಿಲ್ಲ. ಅವರ ಕತ್ತಿನಲ್ಲೊಂದು ಮಚ್ಚೆ ಇದೆ ಎಂಬುದಾಗಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದ್ದಾರೆ.

ಸದಾಶಿವನಗರದಲ್ಲಿರುವ ಜಾರಕಿಹೊಳಿಯವರ ಭಾಗ್ಯಲಕ್ಷೀ ನಿವಾಸಕ್ಕೆ ಆಗಮಿಸಿದ ಮಹೇಶ್ ಕುಮಟಳ್ಳಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು, ಈ ಘಟನೆ ನೋಡಿದಾಗ ನಮಗೂ ಆಶ್ಚರ್ಯವಾಯಿತು. ಜಾರಕಿಹೊಳಿ ಒಬ್ಬ ದೈವ ಭಕ್ತರು. ಇವರಿಗೆ ಏನಾಗಿದೆ ಇದು ನಿಜವೇ ಅಥವಾ ಸುಳ್ಳಾ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಜಾರಕಿಹೊಳಿಯವರು ಇದು ಫೇಕ್ ವಿಡಿಯೋ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಆದರೂ ಆ ವಿಡಿಯೋವನ್ನು ಗಮನಿಸಿದಾಗ ಪೂರ್ವನಿಯೋಜಿತ ಕೃತ್ಯದಂತೆ ಕಂಡುಬರುತ್ತಿದೆ ಎಂದರು.

ದೃಶ್ಯಗಳನ್ನು ಗಮನಿಸಿದರೆ ಇದೂ ಪೂರ್ವನಿಯೋಜಿತ ಕೃತ್ಯವಾಗಿ ಗೋಚರಿಸುತ್ತಿದೆ. ಮತ್ತೆ ಈ ದೃಶ್ಯವನ್ನು ಯಾರು ಚಿತ್ರಿಸಿದ್ದಾರೆ ಎಂದು ತನಿಖೆಯಾಗಬೇಕು. ಅ ವಿಡಿಯೋವನ್ನು ಗಮನಿಸಿದಾಗ ಅದು ಎಡಿಟ್ ಆಗಿರುವಂತೆ ಕಂಡು ಬರುತ್ತಿದೆ. ಇದರಿಂದ ನಮಗೆ ಮತ್ತು ಅವರ ಕುಟುಂಬದವರಿಗೆ ನೋವಾಗಿದೆ ಈ ನೋವಿಗೆ ಯಾರು ಬೆಲೆ ಕಟ್ಟುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *