ವಿಶ್ವ ಕೊರೊನಾದಿಂದ ಮುಕ್ತಿ ಹೊಂದಲಿ- ಮೋದಿ ಪ್ರಾರ್ಥನೆ

– ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ

ಢಾಕಾ: ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದ ಪುರಾತಣವಾದ ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ ಮಹಾಮಾರಿಯಿಂದ ಬೇಗ ಮುಕ್ತಿ ಕೊಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಬಾಂಗ್ಲಾದೇಶ ಪ್ರವಾಸದ ಎರಡನೇ ದಿನವಾದ ಇಂದು ಮೋದಿ ಬಾಂಗ್ಲಾದ ಸತ್ಖಿರಾ ಜಿಲ್ಲೆಯಲ್ಲಿರುವ ಅತ್ಯಂತ ಪುರಾಣ ಪ್ರಸಿದ್ಧ ಜೆಶೋರೇಶ್ವರಿ ಕಾಳಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಕಾಳಿ ದೇವಾಲಯವು ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಗಡಿ ಪ್ರದೇಶದವಾದ ಈಶ್ವರಿಪುರ ಗ್ರಾಮದಲ್ಲಿದ್ದು, ಇಲ್ಲಿ ಭಾರತ ಹಾಗೂ ಬಾಂಗ್ಲಾದೇಶದ ಎರಡು ಕಡೆಯ ಜನರು ಪೂಜೆ ಸಲ್ಲಿಸುತ್ತಾರೆ.

https://twitter.com/ANI/status/1375663846111645697

ಮೋದಿ ಮಾಸ್ಕ್ ಧರಿಸಿಕೊಂಡು ದೇವಾಲಯಕ್ಕೆ ಭೇಟಿಕೊಟ್ಟು ಭಕ್ತಿಯಿಂದ ಪೂಜೆ ಸಲ್ಲಿಸಿ ನಂತರ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಪುರಾಣ ಪ್ರಸಿದ್ಧ ಕಾಳಿ ದೇವಾಲಯಕ್ಕೆ ಭೇಟಿ ನೀಡಿ ಕಾಳಿಯೊಂದಿಗೆ ವಿಶ್ವಕ್ಕೆ ಅಂಟಿಕೊಂಡಿರುವ ಕೊರೊನಾ ಸೋಂಕಿನಿಂದ ಬೇಗ ಮುಕ್ತಿಕೊಡುವಂತೆ ಬೇಡಿಕೊಂಡಿದ್ದೇನೆ ಎಂದರು.

ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ ಮಾಹಿತಿ ಪ್ರಕಾರ ಭಾರತ ಬಾಂಗ್ಲಾದೇಶ ಸರ್ಕಾರೊಂದಿಗೆ ಕಾಳಿ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಮಾಡಲು ಮನವಿ ಮಾಡಿಕೊಂಡಿದೆ. ಸಮುದಾಯ ಭವನವು ಭಕ್ತರಿಗೆ ವಿಶ್ರಾಂತಿ ಮತ್ತು ನೈಸರ್ಗಿಕ ವಿಪತ್ತಿನ ವೇಳೆ ವಸತಿಗಾಗಿ ಸಹಾಯವಾಗಲು ಭಾರತ ಈ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ ಎಂದು ತಿಳಿಸಿದ್ದಾರೆ.

ಇತಿಹಾಸದ ಪ್ರಕಾರ ಜೆಶೋರೇಶ್ವರಿ ಕಾಳಿ ದೇವಾಲಯವು 51 ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಭಾರತದ ರಾಜ ಈ ದೇವಾಲಯವನ್ನು 16ನೇ ಶತಮಾನದಲ್ಲಿ ಕಟ್ಟಿರುವುದಾಗಿ ಮಾಹಿತಿ ಇದೆ. 2015ರಲ್ಲಿ ಬಾಂಗ್ಲಾ ಪ್ರವಾಸದ ವೇಳೆ ಮೋದಿ ಢಾಕಾದ ಧಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

Comments

Leave a Reply

Your email address will not be published. Required fields are marked *