ವಿವಾದ ಸೃಷ್ಟಿಸಿದ ಚೈತ್ರಾ ಕೊಟ್ಟೂರು ವಿವಾಹ – ಕಾದು ನೋಡಿ ತೀರ್ಮಾನ ಕೈಗೊಳ್ಳಲು ಮುಂದಾದ ಕುಟುಂಬಸ್ಥರು

ಕೋಲಾರ: ನಟಿ, ಬರಹಗಾರ್ತಿ, ಬಿಗ್ ಬಾಸ್ ಸೀಸನ್-7ರ ಸ್ಪರ್ಧಿ ಚೈತ್ರಾ ಕೊಟ್ಟೂರು ಮದುವೆ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಭಾನುವಾರ ಬೆಳಗ್ಗೆ ಬೆಂಗಳೂರಿನ ದೇವಾಲಯವೊಂದರಲ್ಲಿ ಸರಳವಾಗಿ ಮಂಡ್ಯ ಮೂಲದ ನಾಗರ್ಜುನರನ್ನ ಮದುವೆಯಾಗಿದ್ದ ಚೈತ್ರಾ, ಸಂಜೆ ವೇಳೆ ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗಿದ್ರು.

ನಾಗರ್ಜುನ್‍ಗೆ ಸಂಘಟನೆಗಳಿಂದ ಬೆದರಿಕೆ ಹಾಕಿ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ಉದ್ಯಮಿ ನಾಗರ್ಜುನ ಪೋಷಕರು ಕೋಲಾರದ ಚೈತ್ರಾ ಮನೆ ಎದುರು ಗಲಾಟೆ ಮಾಡಿದ್ರು. ಹಾಗಾಗಿ ಮಹಿಳಾ ಪೊಲೀಸ್ ಠಾಣೆ ಮೊರೆ ಹೋಗಿದ್ದ ಚೈತ್ರಾ ಕೊಟ್ಟೂರು ಮದುವೆ ವಿವಾದ, ಬುಧವಾರದವರೆಗೂ ಟೈಂ ಪಡೆಯುವ ಮೂಲಕ ಸಣ್ಣ ವಿರಾಮ ಪಡೆದುಕೊಂಡಿದೆ.

ಸದ್ಯ 2 ಕುಟುಂಬದವರು ಒಂದೆಡೆ ಕುಳಿತು ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿದ್ದು, ಅದಕ್ಕೆ ಬುಧವಾರ ಅಂತಿಮ ವರದಿ ಸಿಗಲಿದೆ. ನನಗೆ ಅವನೇ ಬೇಕು ಎಂದು ಪಟ್ಟು ಹಿಡಿದಿರುವ ಚೈತ್ರಾ ಕೊಟ್ಟೂರು, ಕೋಲಾರ ನಗರದ ಕುರುಬರಪೇಟೆಯಲ್ಲಿರುವ ತಮ್ಮ ಮನೆಯಲ್ಲಿದ್ದಾರೆ.

ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವ ಚೈತ್ರಾ, ಬುಧವಾರದವೆರಗೂ ಕಾದು ನೋಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಪೋಷಕರೊಟ್ಟಿಗೆ ಮಂಡ್ಯಕ್ಕೆ ವಾಪಸ್ಸಾಗಿರುವ ನಾಗಾರ್ಜುನ್ ಅವರ ನಿಲುವೇನು ಅನ್ನೋದು ಕೂಡ ನಿಗೂಢವಾಗಿಯೇ ಇದ್ದು, ಒಂದು ವೇಳೆ ಬುಧುವಾರ ಸಮಸ್ಯೆ ಬಗೆಹರಿಯದೆ ಇದ್ದರೆ ಕಾನೂನು ರೀತಿಯಲ್ಲಿ ಹೋರಾಟ ಮಾಡಲು ಚೈತ್ರಾ ನಿರ್ಧಾರ ಮಾಡಿದ್ದಾರೆ.

ಕುಟುಂಬ ಸದಸ್ಯರ ಪ್ರಕಾರ ಎರಡು ಕುಟುಂಬಸ್ಥರು ಸೇರಿ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧಾರ ಮಾಡಿದ್ದು, ಅಲ್ಲಿವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ. ಹಾಗಾಗಿ ಮನೆ ಬಳಿ ಬರಬೇಡಿ ಅನ್ನೋದು ಆಕೆಯ ಸಂಬಂಧಿಕರ ಒತ್ತಾಯದ ಎಚ್ಚರಿಕೆ.

Comments

Leave a Reply

Your email address will not be published. Required fields are marked *