ವಿಮಾನದಲ್ಲಿ ಕಿರಿಕಿರಿ ಉಂಟುಮಾಡಿದ ಯುವತಿಗೆ ತಲೆಗೂದಲಿಗೆ ಚ್ಯುಯಿಂಗಮ್ ಅಂಟಿಸಿದ್ಳು!

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಆನ್ ಬೋರ್ಡ್ ಟಿವಿ ನೋಡುತ್ತಿರುವಾಗ ಕಿರಿಕಿರಿ ಉಂಟುಮಾಡಿದ ಯುವತಿಯ ಕೂದಲಿಗೆ ಸಹಪ್ರಯಾಣಿಕೆ ಒಬ್ಬರು ಚ್ಯುಯಿಂಗಮ್ ಹಾಗೂ ಲಾಲಿಪಪ್ ಅಂಟಿಸಿದ ಪ್ರಸಂಗವೊಂದು ನಡೆದಿದೆ.

ಹೌದು. ವಿಮಾನದಲ್ಲಿ ಪ್ರಯಾಣಿಕರಿಬ್ಬರ ನಡುವೆ ನಡೆದ ಚಿಕ್ಕ ಗಲಾಟೆಯ ವೀಡಿಯೋವೊಂದನ್ನು ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಘಟನೆ ಎಲ್ಲಿ ನಡೆದಿದ್ದು ಹಾಗೂ ಈ ಪ್ರಸಂಗ ನಿಜವಾಗಿಯೂ ನಡೆದಿದೆಯಾ ಎಂಬ ಅನುಮಾನ ಕೂಡ ಮೂಡಿದೆ.

ವೀಡಿಯೋದಲ್ಲಿ ಏನಿದೆ..?
ವಿಮಾನದಲ್ಲಿ ಕುಳಿತಿದ್ದ ಯುವತಿಯೊಬ್ಬಳು ತನ್ನ ಉದ್ದನೆಯ ಚಿನ್ನದ ಬಣ್ಣದ ಕೂದಲನ್ನು ಹಿಂಬದಿಯಲ್ಲಿದ್ದ ಆನ್‍ಬೋರ್ಡ್ ಟಿವಿ ಪರದೆ ಮೇಲೆ ಹಾಕಿದ್ದಾಳೆ. ಆದರೆ ಟಿವಿ ಕಾಣದಿದ್ದರಿಂದ ಹಿಂದಿನ ಸೀಟಿನಲ್ಲಿದ್ದ ಮಹಿಳೆಯ ಒಂದೆರಡು ಬಾರಿ ಕೂದಲನ್ನು ಮುಂದಕ್ಕೆ ಹಾಕುತ್ತಾಲೇ. ಆದರೆ ಯುವತಿ ಮಾತ್ರ ಆಗಾಗ ಕೂದಲನ್ನು ಹಿಂದಕ್ಕೆ ಹಾಕುವ ಮೂಲಕ ಮಹಿಳೆಗೆ ಕಿರಿಕಿರಿ ಉಂಟು ಮಾಡುತ್ತಿದ್ದಳು.

ಯುವತಿಯ ಕೂದಲಿನಿಂದ ಬೇಸತ್ತ ಮಹಿಳೆ ತನ್ನಲ್ಲಿದ್ದ ಚ್ಯುಯಿಂಗಮ್, ಲಾಲಿಪಪ್ ಅನ್ನು ಕೂದಲಿಗೆ ಅಂಟಿಸಿದ್ದಾಳೆ. ಅಲ್ಲದೆ ಅಲ್ಲೇ ಇದ್ದ ಕಾಫಿ ಕಪ್ ಗೆ ಕೂಡ ಕೂದಲನ್ನು ಮುಳುಗಿಸಿದ್ದಾಳೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನೇಲ್ ಕಟ್ಟರ್ ಸಹಾಯದಿಂದ ಕೂದಲನ್ನು ಕತ್ತರಿಸಿದ್ದಾಳೆ. ನಂತರ ಮತ್ತೆ ಪದೇ ಪದೇ ಕೂದಲನ್ನು ಎದುರು ಹಾಕಿದ್ರೂ ಯುವತಿ ಮಾತ್ರ ತನ್ನ ಕೂದಲನ್ನು ಹಿಂದಕ್ಕೆ ಹಾಕುತ್ತಲೇ ಬಂದಿದ್ದಾಳೆ. ಕೊನೆಗೆ ಆಕೆಯ ಕೈಗೆ ಕೂದಲಲ್ಲಿದ್ದ ಚ್ಯುಯಿಂಗಮ್ ಸಿಕ್ಕಿದ್ದು, ಅಚ್ಚರಿಗೊಂಡಿದ್ದಾಳೆ. ಅಲ್ಲದೆ ತಾನು ಕುಳೀತಿದ್ದ ಸೀಟಿನಿಂದ ಎದ್ದು ಮುಂದಕ್ಕೆ ಹೋಗಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

https://www.youtube.com/watch?time_continue=183&v=4SCSr2tBYDg&feature=emb_title&ab_channel=SpottedUK

Comments

Leave a Reply

Your email address will not be published. Required fields are marked *