ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ನ್ಯಾಯಾಂಗ ಬಂಧನವನ್ನ ಮತ್ತೆ ವಿಸ್ತರಣೆ ಮಾಡಲಾಗಿದೆ.

ನವೆಂಬರ್ 5ರಂದು ಸಿಬಿಐನಿಂದ ಬಂಧಿತರಾಗಿರುವ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ಈಗಾಗಲೇ ವಜಾಗೊಂಡಿದ್ದು, ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಇಂದು ಅವರ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆ ಇಂದು ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನವನ್ನ ಜನವರಿ 8ರ ವರೆಗೆ ವಿಸ್ತರಣೆ ಮಾಡಲಾಯಿತು.

ಇದೇ ನ್ಯಾಯಾಲಯದಲ್ಲಿ ವಿನಯ್ ಕುಲಕರ್ಣಿಯವರ ಮಾವ ಚಂದ್ರಶೇಖರ್ ಇಂಡಿ ಕೂಡಾ ನ್ಯಾಯಾಂಗ ಬಂಧನದಲ್ಲಿದ್ದು, ಅವರ ನ್ಯಾಯಾಂಗ ಬಂಧನವನ್ನು ಸಹ ಸಿಬಿಐ ವಿಶೇಷ ನ್ಯಾಯಾಲಯ ಜನವರಿ 8ಕ್ಕೆ ವಿಸ್ತರಣೆ ಮಾಡಿದೆ. ಚಂದ್ರಶೇಕರ ಇಂಡಿ ಅಕ್ರಮ ಶಸ್ತ್ರಾಸ್ರ ಪ್ರಕಣದಲ್ಲಿ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದರು. ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿನಯ್ ಕುಲಕರ್ಣಿ ಇದ್ರೆ, ಧಾರವಾಡ ಜೈಲಿನಲ್ಲಿ ಚಂದ್ರಶೇಖರ್ ಇಂಡಿಯವರನ್ನ ಇಡಲಾಗಿದೆ.

Comments

Leave a Reply

Your email address will not be published. Required fields are marked *