ವಿಡಿಯೋ: ಮಾಸ್ಕ್ ತೆಗೆಯದೇ ಆಹಾರ ಸೇವಿಸ್ಬೋದು ಎಂದು ತೋರಿಸಿಕೊಟ್ಟ ಮಾಡೆಲ್

ನವದೆಹಲಿ: ಕೊರೊನಾ ಎಂಬ ಹೆಮ್ಮಾರಿ ಒಕ್ಕರಿಸಿದ ಬಳಿಕ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಎಷ್ಟರಮಟ್ಟಿಗೆ ಕಡ್ಡಾಯ ಅಂದರೆ ಕೆಲವೆಡೆ ಮಾಸ್ಕ್ ಧರಿಸದೆ ಮನೆಯಿಂದ ಹೊರಬಂದವರಿಗೆ ದಂಡವನ್ನು ಕೂಡ ವಿಧಿಲಾಗುತ್ತಿದೆ. ಈ ಮಾಸ್ಕ್ ಧಾರಣೆಯಿಂದ ಆಹಾರ ಸೇವಿಸಲು ಸ್ವಲ್ಪ ಕಷ್ಟವಾಗುತ್ತಿದೆ. ತಿನ್ನುವಾಗೆಲ್ಲ ಮಾಸ್ಕ್ ತೆಗೆದು ತಿನ್ನಬೇಕು. ಆದರೆ ಬ್ರಿಟಿಷ್ ಮಾಡೆಲ್ ಒಬ್ಬರು ಮಾಸ್ಕ್ ತೆಗೆಯದೆ ಹೀಗೂ ಇನ್ನಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಹೌದು. ಎಮ್ಮಾ ಲೂಯಿಸ್ ಕೊನೊಲ್ಲಿ ಎಂಬ ಬ್ರಿಟಿಷ್ ಮಾಡೆಲ್, ಮಾಸ್ಕ್ ತೆಗೆಯದೆಯೂ ತಿನ್ನಬಹುದು ಎಂದು ತೋರಿಸಿಕೊಟ್ಟವರು. ಇವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಮಾಸ್ಕ್ ತೆಗೆಯದೇ ಆಹಾರ ತಿನ್ನುವ ಒಂದು ವಿಡಿಯೋ ಮಾಡಿದ್ದು, ಈ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಈ ಮೂಲಕ ಮಾಡೆಲ್ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.  ಇದನ್ನೂ ಓದಿಮಾಸ್ಕ್ ಏಕೆ? ಯಾರು? ಯಾವಾಗ? ಹೇಗೆ ಧರಿಸಬೇಕು?- ಇಲ್ಲಿದೆ ಸಂಪೂರ್ಣ ಮಾಹಿತಿ

https://www.instagram.com/p/CC27cVoJUZv/?utm_source=ig_embed

ಈ ವಿಡಿಯೋವನ್ನು ಎಮ್ಮಾ ಅವರು ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಿದ್ದಾರೆ. ಅವರು ಮಾಸ್ಕ್ ಧರಿಸಿಯೇ ಹೇಗೆ ಆಹಾರವನ್ನು ತಿನ್ನಬಹುದು ಎಂಬುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಆದರೆ ಅವರು ಅದನ್ನು ಹೇಗೆ ಮಾಡಿದ್ದಾರೆ ಎಂದು ತಿಳಿದರೆ ನೀವು ಅಚ್ಚರಿ ಪಡಿತ್ತೀರಿ. ಯಾಕಂದ್ರೆ ಅವರು ಎರಡು ಮಾಸ್ಕ್ ಧರಿಸಿದ್ದಾರೆ. ಅದರಲ್ಲಿ ಒಂದನ್ನು ಎಮ್ಮಾ ತಮ್ಮ ಮೂಗಿನ ಮೇಲೆ, ಇನ್ನೊಂದನ್ನು ತನ್ನ ಗಲ್ಲದ ಕೆಳಗೆ ಇಟ್ಟಿದ್ದಾರೆ. ಈ ಮೂಲಕ ಆಹಾರವನ್ನು ಸುಲಭವಾಗಿ ತಿಂದಿದ್ದಾರೆ. ಇದನ್ನೂ ಓದಿ: 3.5 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಧರಿಸಿ ಗಮನಸೆಳೆದ ಉದ್ಯಮಿ!

ಈ ವಿಡಿಯೋ ಅಪ್ಲೋಡ್ ಮಾಡಿ, ಮನಸ್ಸಿದ್ದರೆ ಮಾರ್ಗ, ಮಾಸ್ಕ್ ಧರಿಸಿಕೊಂಡೇ ತಿನ್ನಲು ಕೂಡ ಮಾರ್ಗವಿದೆ ಎಂದು ಬರೆದುಕೊಂಡಿದ್ದಾರೆ. ಎಮ್ಮಾ ಅವರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುತ್ತಿದ್ದಂತೆಯೇ ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ಇದೂವರೆಗೂ ಸರಿ ಸುಮಾರು 4 ಲಕ್ಷದಷ್ಟು ಬಾರಿ ವೀಕ್ಷಣೆಯಾಗಿದೆ. ಇದನ್ನೂ ಓದಿ: 2.75 ಲಕ್ಷ ಚಿನ್ನ, 15 ಸಾವಿರ ರೂ. ಮೌಲ್ಯದ ಬೆಳ್ಳಿ ಬಳಸಿ ಮಾಸ್ಕ್ ತಯಾರಿಸಿದ ಅಕ್ಕಸಾಲಿಗ

ಮಾಡೆಲ್ ಹುಚ್ಚುತನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಹಲವು ಮಂದಿ ತಮಾಷೆಯಾಗಿ ಕಮೆಂಟ್‍ಗಳನ್ನು ಮಾಡಿದ್ದಾರೆ. ಇನ್ನೂ ಕೆಲವರು ವಿಡಿಯೋ ನೋಡಿ ನಗು ಕಂಟ್ರೊಲ್ ಮಾಡೋಕೆ ಆಗ್ತಿಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!

Comments

Leave a Reply

Your email address will not be published. Required fields are marked *