ವಿಜಯ್‌ ಶಂಕರ್‌ ಆತ್ಮಹತ್ಯೆ – ಸೂಸೈಡ್‌ಗೆ ಕಾರಣ ಏನು?

ಬೆಂಗಳೂರು: ಐಎಎಸ್ ಅಧಿಕಾರಿ ವಿಜಯ್‍ಶಂಕರ್ ಆತ್ಮಹತ್ಯೆಗೆ ನಿಜವಾದ ಕಾರಣ ಏನು ಎನ್ನವುದು ತಿಳಿದಿಲ್ಲ. ಆದರೆ ಐಎಂಎ ಹಗರಣ ಬೆಳಕಿಗೆ ಬಂದ ನಂತರ ಅವರು ಮಾನಸಿಕವಾಗಿ ನೊಂದಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

ಐಎಂಎ ಹಗರಣದ ಸಂಬಂಧ ಸಿಬಿಐ ವಿಜಯ್ ಶಂಕರ್ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ಜೂನ್ 6 ರಂದು ಸಿಬಿಐ ಸರ್ಕಾರಕ್ಕೆ ಪತ್ರ ಬರೆದಿತ್ತು. ತನಿಖೆಯಲ್ಲಿ ಸಾಕಷ್ಟು ಮಾಹಿತಿಗಳು ಹೊರ ಬಂದಿವೆ. ಆರೋಪಿ ಸ್ಥಾನದಲ್ಲಿ ಇರುವ ವಿಜಯ್ ಶಂಕರ್ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಬೇಕು. ಅಲ್ಲದೆ ಆರೋಪಿ ವಿಜಯ್ ಶಂಕರ್‌ಗೆ ಸರ್ಕಾರ ಯಾವುದೇ ಸಹಾಯ ಮಾಡಬಾರದು ಎಂದು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಸಿಬಿಐ ಎಸ್‍ಪಿ ಶೇಪಸ್ ಕಲ್ಯಾಣ್ ಪತ್ರ ಬರೆದಿದ್ದರು.

ಎಸ್‌ಪಿ ಬರೆದ ಪತ್ರಕ್ಕೆ ಜೂನ್‌ 8 ರಂದೇ ವಿಜಯ್‌ ಭಾಸ್ಕರ್‌ ಅನುಮತಿ ನೀಡಿದ್ದರು. ಇಲಾಖಾ ತನಿಖೆ ಮಾಡಲು ಸೂಕ್ತ ಪ್ರಕರಣ. ಈ ಸಂಬಂಧ ಕ್ರಮಕೈಗೊಳ್ಳಿ ಎಂದು ಸಂಬಂಧಪಟ್ಟ ಇಲಾಖೆಗೆ ಪತ್ರವನ್ನು ರವಾನಿಸಲಾಗಿತ್ತು.

ಇಲಾಖಾ ಮಟ್ಟದ ತನಿಖೆಗೆ ಸರ್ಕಾರದ ಗ್ರೀನ್ ಸಿಗ್ನಲ್ ನೀಡಿದ್ದು ನಿವೃತ್ತಿಯ ಅಂಚಿನಲ್ಲಿ ಇದ್ದ ವಿಜಯ್ ಶಂಕರ್ ಗೆ ಇದು ಬಿಸಿ ತುಪ್ಪ ಆಗಿತ್ತು. ನಿವೃತ್ತಿಯ ಸಂದರ್ಭದಲ್ಲಿ ವಿಚಾರಣೆ ಮಾತ್ರ ಅಲ್ಲದೇ ಇಲಾಖೆ ಆರಂಭವಾದರೆ ಬಹಳ ಕಷ್ಟ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ತನಿಖಾ ತಂಡ ಬಂಧಿಸಿ ಕೆಳ ನ್ಯಾಯಾಲಯದಲ್ಲಿ ಜಾಮೀನು ಸಿಗದೇ ಇದ್ದಾಗ ವಿಜಯ್‌ ಶಂಕರ್‌ ಕಣ್ಣೀರಿಟ್ಟಿದ್ದರು. ಜಿಲ್ಲಾಧಿಕಾರಿಯಾಗಿದ್ದಾಗ ಅಕ್ರಮ ಒತ್ತುವರಿ ಜಾಗಗಗಳನ್ನು ವಶ ಪಡಿಸಿ ಸರ್ಕಾರಕ್ಕೆ ಜಾಗ ನೀಡಿದ್ದಾಗ ಉತ್ತಮ ಹೆಸರು ಬಂದಿತ್ತು. ಈಗ ಮತ್ತೆ ಸಿಬಿಐ ವಿಚಾರಣೆ ಸರ್ಕಾರ ಅನುಮತಿ ನೀಡಿದ್ದರಿಂದ ವಿಜಯ್‌ ಶಂಕರ್‌ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂಬ ಪ್ರಶ್ನೆ ಎದ್ದಿದೆ.

57 ವರ್ಷದ ವಿಜಯ್‌ ಶಂಕರ್‌ ನಿನ್ನೆ ಜಯನಗರದ ಟಿ ಬ್ಲಾಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಬಳಿಕ ಕೂಡಲೇ ಮರಣೋತ್ತರ ಪರೀಕ್ಷೆ ನಡೆಸದೇ ಗಂಟಲ ದ್ರವನ್ನು ಕೋವಿಡ್‌ 19 ಪರೀಕ್ಷೆಗೆ ಪಡೆಯಲಾಗಿತ್ತು. ಇಂದು ಮಧ್ಯಾಹ್ನ ಫಲಿತಾಂಶ ನೆಗೆಟಿವ್‌ ಬಂದಿದೆ.

ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಪುತ್ರಿ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನಡಿ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?
ಐಎಂಎ ಪ್ರಕರಣದಿಂದ ತಂದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಸಿಬಿಐ ತನಿಖೆ, ಪ್ರಾಸಿಕ್ಯೂಷನ್ ಬಗ್ಗೆ ಮಾನಸಿಕ ಘಾಸಿಗೆ ಒಳಗಾಗಿದ್ದರು. ಮಂಗಳವಾರ ಮಧ್ಯಾಹ್ನ ಮನೆಗೆ ಬಂದ ಬಳಿಕ ಮಹಡಿ ಮೇಲೆ ಹೋಗಿದ್ದರು. ವಿಶ್ರಾಂತಿ ಪಡೆಯಲು ಹೋಗಿದ್ದಾರೆ ಎಂದು ನಾವು ಭಾವಿಸಿದ್ದೆವು. ಸಂಜೆ ಎಷ್ಟು ಹೊತ್ತಾದರೂ ಕೊಠಡಿಯಿಂದ ಹೊರ ಬಂದಿರಲಿಲ್ಲ.

ಐಎಂಎ ಪ್ರಕರಣದಿಂದ ತಂದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಸಿಬಿಐ ತನಿಖೆ, ಪ್ರಾಸಿಕ್ಯೂಷನ್ ಬಗ್ಗೆ ಮಾನಸಿಕ ಘಾಸಿಗೆ ಒಳಗಾಗಿದ್ದರು. ಮಂಗಳವಾರ ಮಧ್ಯಾಹ್ನ ಮನೆಗೆ ಬಂದ ಬಳಿಕ ಮಹಡಿ ಮೇಲೆ ಹೋಗಿದ್ದರು. ವಿಶ್ರಾಂತಿ ಪಡೆಯಲು ಹೋಗಿದ್ದಾರೆ ಎಂದು ನಾವು ಭಾವಿಸಿದ್ದೆವು. ಸಂಜೆ ಎಷ್ಟು ಹೊತ್ತಾದರೂ ಕೊಠಡಿಯಿಂದ ಹೊರ ಬಂದಿರಲಿಲ್ಲ.

ಕೊಠಡಿಯ ಬಾಗಿಲು ಬಡಿದರೂ ತಂದೆ ಡೋರ್ ತೆಗೆಯಲಿಲ್ಲ. ಹೀಗಾಗಿ ಡೋರ್ ಮುರಿದ ಒಳಗೆ ಹೋಗಿದ್ದೆವು. ಈ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ತಂದೆ ಇದ್ದರು. ಕೂಡಲೇ ವೈದ್ಯರನ್ನು ಕರೆಸಿ ನೋಡುವಷ್ಟರಲ್ಲಿ ಪ್ರಾಣ ಹೋಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Comments

Leave a Reply

Your email address will not be published. Required fields are marked *