ವಿಜಯಲಕ್ಷ್ಮಿ ದರ್ಶನ್ ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಸಾಮಾಜಿಕ ಜಾಲತಾಣಗಳ ಖಾತೆ ಹ್ಯಾಕ್ ಆಗಿದೆ.

ಈ ಕುರಿತು ಟ್ವೀಟ್ ಮಾಡಿ ಸ್ವತಃ ವಿಜಯಲಕ್ಷ್ಮಿ ಅವರೇ ಖಚಿತಪಡಿಸಿದ್ದು, ಆತ್ಮೀಯರೇ, ನನ್ನ ಸಾಮಾಜಿಕ ಜಾಲತಾಣಗಳ ಯಾವುದೇ ಖಾತೆಯಿಂದ ಆಕ್ಷೇಪಾರ್ಹ ಪೋಸ್ಟ್ ಅಥವಾ ಸಂದೇಶಗಳು ಬಂದಲ್ಲಿ ದಯವಿಟ್ಟು ಕ್ಷಮಿಸಿ, ಸಾಮಾಜಿಕ ಜಾಲತಾಣಗಳ ಖಾತೆಗಳು ಹ್ಯಾಕ್ ಆಗಿವೆ ಎಂದು ಬರೆದಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದು, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಕುರಿತು ಸಹ ಆಗಾಗ ಅಪ್‍ಡೇಟ್ ನೀಡುತ್ತಿರುತ್ತಾರೆ. ಆದರೆ ಇದೀಗ ಇದ್ದಕ್ಕಿದ್ದಂತೆ ಅಕೌಂಟ್ ಹ್ಯಾಕ್ ಆಗಿರುವ ಕುರಿತು ತಿಳಿಸಿ, ಅಭಿಮಾನಿಗಳನ್ನು ಅಚ್ಚರಿ ಪಡುವಂತೆ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ವಿಜಯಲಕ್ಷ್ಮಿ ಹೊಸ ಉದ್ಯಮವನ್ನು ಆಂಭಿಸಿದ್ದಾರೆ. ‘ಮೈ ಫ್ರೆಶ್ ಬಾಸ್ಕೆಟ್’ ಎಂಬ ಆನ್ ಲೈನ್ ಆ್ಯಪ್ ಒಂದನ್ನು ತೆರೆದು ರೈತರಿಗೆ ನೆರವಾಗಿದ್ದರು. ಆ್ಯಪ್ ಮೂಲಕ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೀಡಬಹುದಾಗಿದೆ. ಅಲ್ಲದೆ ಗ್ರಾಹಕರಿಗೂ ರೈತರಿಂದ ನೇರವಾಗಿ ತರಕಾರಿ ಹಾಗೂ ಹಣ್ಣುಗಳು ತಲುಪುತ್ತಿವೆ. ಹೀಗೆ ರೈತರಿಗೆ ನೆರವಾಗುವ ಸಲುವಾಗಿ ವಿಜಯಲಕ್ಷ್ಮಿ ಅವರು ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ವಿಜಯಲಕ್ಷ್ಮಿ ಅವರು ಹೊಸದಾಗಿ ಆರಂಭಿಸಿರುವ ಆನ್‍ಲೈನ್ ಉದ್ಯಮಕ್ಕೆ ಸಂಬಂಧಿಸಿದಂತೆ ಅವರಿಗೆ ಪ್ರಶಸ್ತಿ ಸಹ ಲಭಿಸಿತ್ತು. ಟೈಮ್ಸ್ ಬ್ಯುಸಿನೆಸ್ ನವರು ಉದಯೋನ್ಮುಖ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿಯನ್ನು ನೀಡಿದ್ದರು. ಈ ವಿಚಾರವನ್ನು ಸಹ ವಿಜಯಲಕ್ಷ್ಮಿ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಜೊತೆಗೆ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

Comments

Leave a Reply

Your email address will not be published. Required fields are marked *