ವಿಕ್ರಾಂತ್ ರೋಣದಲ್ಲಿ ಸುದೀಪ್ ಜೊತೆ ಅದ್ಭುತ ಕಾಲ ಕಳೆದೆ: ಜಾಕ್ವೆಲಿನ್

ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೇ ಮೊದಲ ಬಾರಿಗೆ ಕನ್ನಡದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಭಿನಯಿಸಿದರ ಕುರಿತು ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತಂತೆ ಜಾಕ್ವೆಲಿನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ವಿಕ್ರಾಂತ್ ರೋಣ ಚಿತ್ರೀಕರಣದ ವೇಳೆ ಕಿಚ್ಚ ಸುದೀಪ್ ಅವರೊಂದಿಗೆ ಅದ್ಭುತ ಕಾಲ ಕಳೆದೆ. ಶಾಲಿನಿ ಹಾಗೂ ಜಾಕ್ ಮಂಜುರವರ ಸ್ವಾಗತ ಮತ್ತು ಆತಿಥ್ಯಕ್ಕೆ ಧನ್ಯವಾದಗಳು.

ಕಿಚ್ಚ ಸುದೀಪ್ ಅವರೊಟ್ಟಿಗೆ ದೀರ್ಘಕಾಲದಿಂದ ಕೆಲಸ ಮಾಡಿದ ಅನುಭವ. ಮುಂದಿನ ಬಾರಿ ಟಫ್ ಚೆಸ್ ಆಟಕ್ಕೆ ಸಿದ್ಧರಾಗಿ. ಅನೂಪ್ ಭಂಡಾರಿ ನಿಮ್ಮ ಯೋಜನೆಗಳ ಬಗೆಗಿನ ಸ್ಪಷ್ಟತೆ ಮತ್ತು ವಿಕ್ರಾಂತ್ ರೋಣ ಚಿತ್ರೀಕರಿಸುತ್ತಿರುವ ರೀತಿ ಅದ್ಭುತವಾಗಿದೆ. ಇಡೀ ಚಿತ್ರತಂಡಕ್ಕೆ ಧನ್ಯವಾದ. ಮತ್ತೆ ಶೀಘ್ರದಲ್ಲಿಯೇ ಸಿಗೋಣಾ. ವಿಕ್ರಾಂತ್ ರೋಣ ಸಿನಿಮಾ ಖಂಡಿತಾ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆ ಪಡಿಸುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಇದೇ ಪ್ರಥಮ ಬಾರಿಗೆ ಜಾಕ್ವೆಲಿನ್ ಫರ್ನಾಂಡಿಸ್ ದಕ್ಷಿಣ ಭಾರತದ ಸಿನಿಮಾಕ್ಕೆ ಬಣ್ಣ ಹಚ್ಚಿದ್ದು, ವಿಕ್ರಾಂತ್‍ರೋಣ ಸಿನಿಮಾದ ನಾಯಕನಾಗಿ ನಟ ಕಿಚ್ಚ ಸುದೀಪ್ ನಟಿಸುತ್ತಿದ್ದು, ಚಿತ್ರದ ವಿಶೇಷ ಹಾಡೊಂದಕ್ಕೆ ಜಾಕ್ವೆಲಿನ್ ಹೆಜ್ಜೆ ಹಾಕಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಹಾಡಿಗೆ ನೃತ್ಯ ಮಾಡಲು ಇತ್ತೀಚೆಗಷ್ಟೇ ಮುಂಬೈನಿಂದ ಜಾಕ್ವೆಲಿನ್ ಬೆಂಗಳೂರಿಗೆ ಬಂದಿದ್ದರು. ಸದ್ಯ ಹಾಡಿನ ಚಿತ್ರೀಕರಣ ಪೂರ್ಣಗೊಂಡಿದ್ದು, ಜಾಕ್ವೆಲಿನ್ ಮತ್ತೆ ಮುಂಬೈಗೆ ಹಾರಿದ್ದಾರೆ. ಇದನ್ನೂ ಓದಿ: ಜಾಕ್ವೆಲಿನ್ ಜೊತೆ ಫೇವರೆಟ್ ಫೋಟೋ ಶೇರ್ ಮಾಡಿದ ಸುದೀಪ್

Comments

Leave a Reply

Your email address will not be published. Required fields are marked *