ವರನಿಗೆ ವೇದಿಕೆ ಮೇಲೆಯೇ ಚಪ್ಪಲಿಯಲ್ಲಿ ಹೊಡೆದ ತಾಯಿ

ಲಕ್ನೋ: ಮದುವೆ ಸಮಾರಂಭದ ವೇದಿಕೆ ಮೇಲೆಯೇ ವರನಿಗೆ ತಾಯಿ ಚಪ್ಪಲಿಯಲ್ಲಿ ಹೊಡೆದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸೃಜನ್ ಜೊತೆಗಿನ ಮದುವೆ ಮುರಿದಿದ್ದಕ್ಕೆ ವಿಜಯಲಕ್ಷ್ಮಿ ಸ್ಪಷ್ಟನೆ

ಈ ಘಟನೆ ಉತ್ತರ ಪ್ರದೇಶದ ಹಮೀರ್‍ಪುರ ಜಿಲ್ಲೆಯ ಭರೂವಾ ಸುಮೇರ್‍ಪುರ ಗ್ರಾಮದಲ್ಲಿ ನಡೆದಿದ್ದು, ವಧು ಹಾಗೂ ವರ ಇಬ್ಬರು ಹಾರ ಬದಲಾಯಿಸಿಕೊಳ್ಳುತ್ತಿರುತ್ತಾರೆ. ಈ ವೇಳೆ ಇದಕ್ಕಿದಂತೆ ಮೆಟ್ಟಿಲುಗಳನ್ನು ಹತ್ತಿ ವೇದಿಕೆ ಮೇಲೆ ಬಂದ ವರನ ತಮ್ಮ ಚಪ್ಪಲಿಯನ್ನು ಕಾಲಿನಿಂದ ಬಿಚ್ಚಿ ವರನಿಗೆ ಹೊಡೆಯಲು ಆರಂಭಿಸುತ್ತಾರೆ.

ಈ ದೃಶ್ಯವನ್ನು ಕಂಡು ಸಮಾರಂಭಕ್ಕೆ ಆಗಮಿಸಿದ್ದ ಅಥಿತಿಗಳಿಗೆ ಆಶ್ಚರ್ಯವಾಗಿದೆ. ನಂತರ ಮಗನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದರಿಂದ ಅಸಮಾಧಾನಗೊಂಡ ತಾಯಿ ವರ ಉಮೇಶ್ ಚಂದ್ರರಿಗೆ ಹೊಡೆದಿದ್ದಾರೆ ಎಂಬ ಅಸಲಿ ಸತ್ಯ ಬಹಿರಂಗಗೊಂಡಿದೆ.

ಕುಟುಂಬಸ್ಥರ ವಿರೋಧದ ನಡುವೆ ಉಮೇಶ್ ಚಂದ್ರರವರು ಅಂಕಿತಾ ಎಂಬವರನ್ನು ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ವಿವಾಹದ ನಂತರ ವಧುವಿನ ತಂದೆ ಜುಲೈ 3 ರಂದು ಜಿಲ್ಲಾ ಸಭಾಂಗಣವೊಂದರಲ್ಲಿ ಸಣ್ಣದಾಗಿ ಫಂಕ್ಷನ್ ಮಾಡಲು ನಿರ್ಧರಿಸಿದ್ದರು. ಆದರೆ ಸಮಾರಂಭಕ್ಕೆ ವರನ ಕುಟುಂಬ ಮತ್ತು ಅವರ ಸಹೋದರರನ್ನು ಆಹ್ವಾನಿಸಿದ ಕಾರಣ ಆಕ್ರೋಶಗೊಂಡು ವರನ ತಾಯಿ ಸ್ಥಳಕ್ಕೆ ಆಗಮಿಸಿ ಮಗನಿಗೆ ಎಲ್ಲರ ಸಮ್ಮುಖ ವೇದಿಯಲ್ಲಿಯೇ ಚಪ್ಪಲಿ ಮೂಲಕ ಹೊಡೆದಿದ್ದಾರೆ.

https://youtu.be/AWL9p72roF4

Comments

Leave a Reply

Your email address will not be published. Required fields are marked *