ವಯಸ್ಸಿಗೂ ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ: ನಟಿ ರಾಗಿಣಿ

ಬೆಂಗಳೂರು: ವಯಸ್ಸಿಗು ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ. ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ ಎಂದು ನಟಿ ರಾಗಿಣಿ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಪ್ರತಿಕ್ರಿಯಸಿದ್ದಾರೆ. ಇದನ್ನೂ ಓದಿ: ನಾನು ಡ್ರಗ್ಸ್ ಸೇವನೆ ಮಾಡಲ್ಲ, ಮಾಡೋರ ಬಗ್ಗೆ ಗೊತ್ತಿಲ್ಲ: ರಚಿತಾ ರಾಮ್

ಪಬ್ಲಿಕ್ ಟಿವಿ ಜೊತೆ ಫೋನ್ ಮೂಲಕ ಮಾತನಾಡಿದ ನಟಿ ರಾಗಿಣಿ, ಕಳೆದ ಮೂರು ದಿನಗಳಿಂದ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದೆ. ನಾನು ಸುದ್ದಿ ನೋಡಿ ತಿಳಿದುಕೊಂಡಿದ್ದೇನೆ. ಸ್ಟಾರ್ ನಟ-ನಟಿಯರ ಹೆಸರನ್ನು ಸುಮ್ಮನೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡಬೇಕು ಎಂದರು.

ಇಡೀ ದೇಶದಲ್ಲಿ ಏನೇನೋ ಸುದ್ದಿ ಹೋಗುತ್ತಿದೆ. ಏನೇನೋ ಕಥೆಗಳು ನಡೆಯುತ್ತಿದೆ. ಬಾಂಬೆಯಲ್ಲಿ ನಡೆಯುತ್ತಿರುವ ಕೇಸ್‍ನಿಂದ ಈ ವಿಚಾರ ಹೊರಗಡೆ ಬರುತ್ತಿದೆ. ರೂಟ್ ಕಾರ್ಟ್ ಮೂಲಕ ಎಲ್ಲರನ್ನೂ ಹುಡುಕಲಿ. ಆದರೆ ಅನಾವಶ್ಯಕವಾಗಿ ಇಂಡಸ್ಟ್ರಿ ಅಥವಾ ವೈಯಕ್ತಿಕವಾಗಿ ದೂಷಿಸುವುದು ತಪ್ಪು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲ ಮಾಹಿತಿ ಗೊತ್ತಿದ್ದರೆ ರಕ್ಷಣೆ ತೆಗೆದುಕೊಂಡು ಬಹಿರಂಗಪಡಿಸಲಿ. ಸುಮ್ಮನೆ ಊಹೆಯಿಂದ ಆರೋಪ ಮಾಡುವುದು ಸರಿಯಲ್ಲ. ಯಾವತ್ತಿದ್ದರೂ ಸತ್ಯ ಹೊರಗೆ ಬರಬೇಕು ಎಂದು ನಟಿ ರಾಗಿಣಿ ಗರಂ ಆದರು.

ಇದೇ ವೇಳೆ ಸೌಂದರ್ಯ ಕಾಪಾಡಿಕೊಳ್ಳಲು ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಮಾತನಾಡಿದ ರಾಗಿಣಿ, ಮೊದಲಿಗೆ ವಯಸ್ಸಿಗೂ ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ. ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಎಲ್ಲರೂ ನೈಸರ್ಗಿಕವಾಗಿ ಸೌಂದರ್ಯ ಹೊಂದಿರುತ್ತಾರೆ. ನೈಸಗಿರ್ಕ ಬ್ಯೂಟಿ ಆ್ಯಂಟಿ ಏಜಿಂಗೂ ಪ್ರಕ್ರಿಯೆ ಏನಿದೆ ಎಂದರೆ, ಮೆಡಿಟೇಶನ್, ವ್ಯಾಯಾಮದ ಮೂಲಕ ಮಾಡುತ್ತಾರೆ. ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಡ್ರಗ್ಸ್‌ಗೂ ಆ್ಯಂಟಿ ಏಜಿಂಗೂ ಸಂಬಂಧವೇ ಇಲ್ಲ ಎಂದು ನಟಿ ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *