ಲೈವ್ ಬಂದಿದ್ದೇ ಬಂದಿದ್ದು ರಮ್ಯಾ ಫುಲ್ ಟ್ರೋಲ್..!

– ಕ್ವೀನ್ ಬ್ಯೂಟಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್

ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್, ಮೋಹಕ ನಟಿ ರಮ್ಯಾ ಅವರು ಹಲವು ವರ್ಷಗಳ ಬಳಿಕ ಲೈವ್ ಬಂದು ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ಅಲ್ಲದೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬರೀ ರಮ್ಯಾರದ್ದೇ ಹವಾ ಎನ್ನುವಂತಾಗಿದೆ.

ಹೌದು. ಶುಕ್ರವಾರ ರಾತ್ರಿ ಆರ್ ಜೆ ಒಬ್ಬರು, ರಮ್ಯಾ ಅವರನ್ನು ಇನ್‍ಸ್ಟಾದಲ್ಲಿ ಲೈವ್ ಗೆ ಕೂರಿಸಿದ್ದಾರೆ. ಈ ವೇಳೆ ರಮ್ಯಾ ತಮ್ಮ ಹಲವು ವಿಚಾರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ. ಮದುವೆ, ಊಟ, ಇಷ್ಟವಾಗಿರುವ ವಸ್ತುಗಳು, ಬ್ಯೂಟಿ ಸೀಕ್ರೆಟ್ ಬಗ್ಗೆ ರಮ್ಯಾ ಅವರು ಲೈವ್ ನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ನಟಿ ಲೈವ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಆಕೆಗಾಗಿ ಕಾಯುತ್ತಿದ್ದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಲೈವ್ ನಿಂದ ಅವರ ಫೋಟೋಗಳನ್ನು ಕಟ್ ಮಾಡಿಕೊಂಡು ವೈರಲ್ ಮಾಡಿದ್ದಾರೆ. ಇದನ್ನೂ ಓದಿ: ನಾನು ಇನ್ನೂ ಲಸಿಕೆ ಪಡೆದುಕೊಂಡಿಲ್ಲ: ರಮ್ಯಾ

ಸದ್ಯ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗಿದ್ದಾರೆ. ಇಷ್ಟು ದಿನ ಕೆಲವು ಫೋಟೋಗಳನ್ನು ಮಾತ್ರ ಶೇರ್ ಮಾಡಿಕೊಳ್ಳುತ್ತಿದ್ದ ರಮ್ಯಾ, ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅಭಿಮಾನಿಗಳಿಗೂ ಅವರನ್ನು ನೋಡುವ ಕುತೂಹಲ ಹೆಚ್ಚಾಗಿತ್ತು. ಇದೀಗ ಏಕಾಏಕಿ ಲೈವ್ ಗೆ ಬಂದು ರಮ್ಯಾ ತಮ್ಮ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕೊನೆಗೂ ಲೈವ್ ಬಂದು ತಮ್ಮ ದರ್ಶನ ಮಾಡಿಸಿದ್ದರಿಂದ ಅಭಿಮಾನಿಗಳು ನಟಿಯ ಬ್ಯೂಟಿಗೆ ಫಿದಾ ಆಗಿದ್ದಾರೆ. ಹಲವು ವರ್ಷಗಳ ಬಳಿಕ ಕಂಡ ನಟಿಯನ್ನು ಮತ್ತೊಮ್ಮೆ ಚಿತ್ರರಂಗಕ್ಕೆ ಬರುವಂತೆ ಒತ್ತಾಯಿಸಿ ಟ್ರೋಲ್ ಮಾಡಿದ್ದಾರೆ. ಕೇವಲ ಫೋಟೋಗಳು ಮಾತ್ರವಲ್ಲದೆ ಹಾಡುಗಳನ್ನು ಕೂಡ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನೂ ಓದಿ: ನನ್ನ ಮದುವೆಗೆ ಯಾರೂ ಬರಲ್ಲ ಅಂತೆ: ರಮ್ಯಾ

‘ಯಾರೇ ಬರಲಿ, ಯಾರೇ ಇರಲಿ, ನಿನ್ನ ರೇಂಜಿಗೆ ಯಾರೂ ಇಲ್ಲ’ ಎಂದು ನಟಿಯ ಬ್ಯೂಟಿಯನ್ನು ಅಭಿಮಾನಿಗಳು ಬಣ್ಣಿಸಿದ್ದಾರೆ. ಅಲ್ಲದೆ ‘ನೀವು ನಮ್ಮ ಆಲ್ ಟೈಂ ಪೇವರೇಟ್.. ಕನ್ನಡ ಚಿತ್ರರಂಗ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದೆ. ದಯವಿಟ್ಟು ಮತ್ತೆ ನಟಿಸಿ’ ಎಂದು ಒತ್ತಡ ಹಾಕಿದ್ದಾರೆ. ಇನ್ನೂ ‘ಲೈವ್ ಬಂದಿದಕ್ಕೇ ಇಷ್ಟೊಂದು ಹವಾ, ಇನ್ನು ತೆರೆ ಮೇಲೆ ಬಂದ್ರೆ ಹೆಂಗೆ..’ ಎಂದು ಪ್ರಶ್ನಿಸುವ ಮೂಲಕ ಟ್ರೋಲ್ ಮಾಡಿದ್ದಾರೆ. ಇತ್ತ ನಟಿ ಕೂಡ ಮತ್ತೊಮ್ಮೆ ತಮ್ಮ ಇನ್ ಸ್ಟಾ ಖಾತೆಯಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಬಳಿ ಎಲ್ಲರಿಗೂ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಕ್ಷಮಿಸಿ ಎಂದು ಹೇಳುತ್ತಾ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ನಾನು ಈ ಮೂರು ವಸ್ತುಗಳನ್ನು ಮರೆಯುತ್ತೇನೆ: ರಮ್ಯಾ

ಒಟ್ಟಿನಲ್ಲಿ ಇದ್ದಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿದ್ದ ರಮ್ಯಾ ಅವರು ಕ್ರಮೇಣ ರಾಜಕಾರಣದತ್ತ ಮುಖ ಮಾಡಿದ್ದರು. ಹೀಗಾಗಿ ಚಿತ್ರರಂಗದಿಂದ ಕೊಂಚ ದೂರವೇ ಉಳಿದಿದ್ದು, ಅಭಿಮಾನಿಗಳು ಅವರನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದರು. ತಮ್ಮ ನಟನೆ ಹಾಗೂ ಬ್ಯೂಟಿಯಿಂದಲೇ ಮನೆಮಾತಾಗಿದ್ದ ಅವರನ್ನು ಇದೀಗ ಹಲವು ಸಮಯಗಳ ಬಳಿಕ ಕಂಡ ಅಭಿಮಾನಿಗಳು ಪುಳಕಿತರಾಗಿದ್ದಂತೂ ಸತ್ಯ.

Comments

Leave a Reply

Your email address will not be published. Required fields are marked *