ಲವ್‍ಮಾಕ್ಟೇಲ್-2 ಸ್ಕ್ರಿಪ್ಟ್ ಬರೆಯೋದ್ರಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಫುಲ್ ಬ್ಯುಸಿ

ಬೆಂಗಳೂರು: ಲವ್ ಮಾಕ್‍ಟೇಲ್ ಸಕ್ಸಸ್ ಬಳಿಕ ಅದೇ ಸೀಕ್ವೆಲ್‍ನ ಮತ್ತೊಂದು ಸಿನಿಮಾ ಮಾಡಲು ನಟ, ನಿರ್ದೇಶಕ ಡಾರ್ಲಿಂಗ್ ನಿರ್ಧರಿಸಿರುವುದು ತಿಳಿದಿರುವ ವಿಚಾರ. ಆದರೆ ಅದರ ಕೆಲಸಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಡಾರ್ಲಿಂಗ್ ಕೃಷ್ಣ ನೀಡಿರಲಿಲ್ಲ. ಇದೀಗ ಆ ಗುಟ್ಟು ಹೊರ ಬಿದ್ದಿದ್ದು, ಲವ್ ಮಾಕ್‍ಟೇಲ್-2 ತಯಾರಿ ಭರದಿಂದ ಸಾಗಿದೆ.

ಕನ್ನಡ ಚಿತ್ರರಂಗದಲ್ಲಿ ಲವ್ ಮಾಕ್‍ಟೇಲ್ ಮಾಡಿದ ಮೋಡಿ ಅಂತಿತದ್ದಲ್ಲ. ಇನ್ನೇನು ಎಲ್ಲ ಥೀಯೇಟರ್‍ಗಳಲ್ಲಿ ತೆಗೆಯಲಾಗಿದೆ ಎನ್ನುವಷ್ಟರಲ್ಲೇ ಕೇವಲ ಒಂದು ಚಿತ್ರಮಂದಿರಲ್ಲಿ ಒಂದೇ ಶೋ ನಡೆಯುತ್ತಿದ್ದ ಸಿನಿಮಾ, ಬರು ಬರುತ್ತ ಮಲ್ಟಿಫ್ಲೆಕ್ಸ್‍ಗಳಲ್ಲಿ ಸದ್ದು ಮಾಡಲು ಪ್ರಾರಂಭಿಸಿತು. ಥೀಯೇಟರ್‍ನಲ್ಲಿ ಸದ್ದು ಮಾಡಿದ್ದಲ್ಲದೇ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಸಹ ಫುಲ್ ಹವಾ ಸೃಷ್ಟಿಸಿತ್ತು. ಸಾಮಾಜಿಕ ಜಲತಾಣಗಳಲ್ಲಂತೂ ನಿಧಿಮಾ ಬಗ್ಗೆಯೇ ಮಾತು. ಹುಡುಗರು ಹೆಂಡತಿ ಇದ್ದರೆ ನಿಧಿಮಾ ರೀತಿ ಇರಬೇಕು ಎನ್ನುವಷ್ಟರ ಮಟ್ಟಿಗೆ ಚರ್ಚೆ ನಡೆದಿತ್ತು.

ಸಿನಿಮಾ ಸೋತಿತು ಎನ್ನುವಷ್ಟರಲ್ಲಿ ಅದು ಗೆದ್ದ ಪರಿ ಹಾಗೂ ಜನಪ್ರಿಯತೆ ನಟ, ನಿರ್ದೇಶಕ, ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಹೀಗಾಗಿ ಅದೇ ಮೂಡ್‍ನಲ್ಲಿದ್ದರು. ಈ ಹೊತ್ತಿನಲ್ಲಿ ಇನ್ನೊಂದು ಅಚ್ಚರಿಯ ಸುದ್ದಿಯೂ ಹೊರ ಬಿತ್ತು. ಅದೇ ಲವ್ ಮಾಕ್‍ಟೇಲ್-2 ಸಿನಿಮಾ ಮಾಡುವುದು. ಹೌದು ಡಾರ್ಲಿಂಗ್ ಕೃಷ್ಣ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದಾಗಿನಿಂದ ಅದರಲ್ಲೇ ಮಗ್ನರಾಗಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಸ್ಕ್ರಿಪ್ಟ್ ಬರೆಯಲು ಇದೇ ಉತ್ತಮ ಅವಕಾಶ ಎಂದು ಮನೆಯಲ್ಲೇ ಕುಳಿತು, ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಆ್ಯಂಡ್ ಟೀಮ್ ಸಿನಿಮಾ ಸ್ಕ್ರಿಪ್ಟ್ ಬರೆಯುವ ಕಾರ್ಯದಲ್ಲಿ ಮಗ್ನರಾಗಿದ್ದು, ಹಗಲು ರಾತ್ರಿ ಎನ್ನದೆ, ಪೆನ್, ಪುಸ್ತಕ ಹಿಡಿದು ಕೆಲಸ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕಂಡಿದ್ದು, ಡಾರ್ಲಿಂಗ್ ಕೃಷ್ಣ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿದ್ದು, ಬ್ರೇನ್‍ಸ್ಟಾರ್ಮಿಂಗ್ ಫಾರ್ ಲವ್ ಮಾಕ್‍ಟೇಲ್-2 ವಿತ್ ಮೈ ಟೀಮ್ ಎಂದು ಲವ್ ಎಮೋಜಿ ಹಾಕಿದ್ದಾರೆ. ಅಲ್ಲದೆ ಹ್ಯಾಶ್ ಟ್ಯಾಗ್‍ನೊಂದಿಗೆ ಸ್ಕ್ರಿಪ್ಟಿಂಗ್, ಸಂಡೇ ಎಂದು ಬರೆದು, ಮಿಲನ ನಾಗರಾಜ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

 

View this post on Instagram

 

Brainstorming for Love mocktail 2 with my team♥️♥️ #scripting #Sunday @milananagaraj

A post shared by Darling Krishna (@darling_krishnaa) on

ಈ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡುತ್ತಿದ್ದು, ವೇಟಿಂಗ್ ಫಾರ್ ಲವ್ ಮಾಕ್‍ಟೇಲ್-2 ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮೈ ಫೇವರಿಟ್ ಕಪಲ್ಸ್ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಲವ್ ಮಾಕ್‍ಟೇಲ್-2ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

Comments

Leave a Reply

Your email address will not be published. Required fields are marked *