ಲಾಕ್‍ಡೌನ್ ಮಾಡಿದ್ರೆ ಜನ ಸಾಯ್ತಾರೆ, ಸೆಕ್ಷನ್ 144 ತನ್ನಿ: ಸಿ.ಎಂ.ಇಬ್ರಾಹಿಂ

– ಲಾಕ್‍ಡೌನ್ ಒಂದೇ ಪರಿಹಾರ ಅಲ್ಲ

ಬೆಂಗಳೂರು: ಲಾಕ್‍ಡೌನ್ ಮಾಡಿದ್ರೆ ಜನರು ಸಾಯ್ತಾರೆ. ಅದರ ಬದಲಾಗಿ ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿಗೆ ತರಬೇಕು. ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರ ಅಲ್ಲ ಎಂದು ಕಾಂಗ್ರೆಸ್ ಎಂಎಲ್‍ಸಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಸಿಎಂ, ಸಚಿವರು, ಬೆಂಗಳೂರಿನ ಶಾಸಕರ ಜೊತೆಗಿನ ಸಭೆ ಬಳಿಕ ಸಿಎಂ ಇಬ್ರಾಹಿಂ ಮಾಧ್ಯಮಗಳ ಜೊತೆ ಮಾತನಾಡಿದರು. ಸರ್ಕಾರ ಸಂಪೂರ್ಣವಾಗಿ ಗೊಂದಲದಲ್ಲಿದ್ದು, ಗಂಟು ಹಾಕಿ ಹೊಳೆಯಲ್ಲಿ ಬಿಟ್ಟಂತಾಗಿದೆ. ರಾಜ್ಯದಲ್ಲಿ ಬೆಡ್, ಆಕ್ಸಿಜನ್, ಇಂಜೆಕ್ಷನ್, ಲಸಿಕೆ ಮತ್ತು ಔಷಧಿಗಳ ಕೊರತೆ ಇದೆ. ಈ ಬಗ್ಗೆ ಸಭೆಯಲ್ಲಿ ಯಾವುದೇ ಸ್ಪಷ್ಟವಾದ ಉತ್ತರ ಸಿಗಲಿಲ್ಲ. ವ್ಯಾಕ್ಸಿನ್ ಪಡೆದವರಿಗೂ ಸೋಂಕು ತಗಲುತ್ತಿದೆ. ಹಾಗಾಗಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸರ್ಕಾರ ಜನರ ಗೊಂದಲವನ್ನ ಪರಿಹರಿಸಬೇಕೆಂದು ಸಿಎಂ ಇಬ್ರಾಹಿಂ ಒತ್ತಾಯಿಸಿದರು. ಇದನ್ನೂ ಓದಿ: ಮಸೀದಿಗಳನ್ನು ಸಂಪೂರ್ಣ ಬಂದ್ ಮಾಡಬೇಡಿ – ಮುಸ್ಲಿಂ ಶಾಸಕರ ಮನವಿ

ಲಾಕ್‍ಡೌನ್ ಪರಿಹಾರ ಅಲ್ಲ: ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರ ಅಲ್ಲ. ಲಾಕ್‍ಡೌನ್ ಮಾಡುವ ಬದಲು ಸೆಕ್ಷನ್ 144 ಹಾಕಿ, ನಾಲ್ಕಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ ಎಂಬ ಕಠಿಣ ನಿಯಮ ಜಾರಿಯಾಗಬೇಕು. ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯಿಂದ ಸೋಂಕು ಹರಡಲ್ಲ ಅನ್ನೋದು ತಜ್ಞರ ಅಭಿಪ್ರಾಯ. ಈ ರೀತಿ ಎಲ್ಲ ತಜ್ಞರ ಅಭಿಪ್ರಾಯ ಕ್ರೋಢಿಕರಿಸಿ ಜನರಿಗೆ ಕುಟುಂಬಸ್ಥರಿಗೆ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ರಸ್ತೆ ರಸ್ತೆಯಲ್ಲಿ ಹೆಣ ಕಾಣುವ ಸ್ಥಿತಿ ಬರುತ್ತೆ ಎಂದು ಇಬ್ರಾಹಿಂ ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂ ಆಸ್ಪತ್ರೆಯಲ್ಲಿದ್ದಾರೆ, ಬಿಜೆಪಿ ಸರ್ಕಾರ ಐಸಿಯುನಲ್ಲಿದೆ – ಸಿದ್ದರಾಮಯ್ಯ

ಜನರಿಗೆ ಕೊರೊನಾ ಕುರಿತ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಹಾಗಾದಾಗ ಮಾತ್ರ ಬೆಡ್ ಗಳ ಸಮಸ್ಯೆ ನಿವಾರಣೆ ಆಗುತ್ತೆ. ಸರ್ಕಾರಕ್ಕೆ ಕೊರೊನಾ ನಿಯಂತ್ರಣಕ್ಕಾಗಿ ಸಲಹಗೆಳನ್ನ ನೀಡಿದ್ದೇವೆ. ಸರ್ಕಾರ ಶೀಘ್ರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.

Comments

Leave a Reply

Your email address will not be published. Required fields are marked *