ಲಾಕ್‍ಡೌನ್ ನಡುವೆ 80 ಲಕ್ಷ ದಂಡ ವಸೂಲಿ ಮಾಡಿದ ಮಂಡ್ಯ ಪೊಲೀಸರು

ಮಂಡ್ಯ: ಲಾಕ್‍ಡೌನ್ ವೇಳೆ ಕೋವಿಡ್ ಮಾರ್ಗ ಸೂಚಿ ಹಾಗೂ ಟ್ರಾಫಿಕ್ ರೂಲ್ಸ್ ನ್ನು ಉಲ್ಲಂಘನೆ ಮಾಡಿದ ಜನರಿಂದ ಮಂಡ್ಯ ಪೊಲೀಸರು 55 ದಿನಗಳ ಅವಧಿಯಲ್ಲಿ 80 ಲಕ್ಷ ರೂ. ದಾಖಲೆಯ ದಂಡವನ್ನು ವಸೂಲಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗ ಸೂಚಿ ಉಲ್ಲಂಘನೆ ಮಾಡಿ ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅನಾವಶ್ಯಕವಾಗಿ ರಸ್ತೆಗೆ ಬರುವುದು ಸೇರಿದಂತೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಜನರಿಂದ 80 ಲಕ್ಷ ರೂಪಾಯಿಯನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಈ ಮೊದಲೇ ಯಾರು ಸಹ ಅನಗತ್ಯವಾಗಿ ರಸ್ತೆ ಬರಬೇಡಿ, ಕೊರೊನಾ ನಿಯಮ ಪಾಲಿಸಿ ಇಲ್ಲದಿದ್ದರೆ ಕೇಸ್ ಹಾಕಲಾಗುವುದು ಎಂದು ಜನರಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಖಡಕ್ ಆಗಿ ವಾರ್ನ್ ಮಾಡಿತ್ತು. ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ವಾರ ಕಂಪ್ಲೀಟ್ ಲಾಕ್‍ಡೌನ್ ವಿಸ್ತರಣೆ

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸೂಚನೆಯನ್ನು ಮೀರಿ ಜನರು ಅನಾವಶ್ಯಕವಾಗಿ ರಸ್ತೆ ಬರುವುದರ ಜೊತೆಗೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಸಾರ್ವಜನಿಕರಿಂದ ಇಷ್ಟೊಂದು ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಸಂಬಂಧ 55 ದಿನಗಳಲ್ಲಿ 46,972 ಕೇಸ್‍ಗಳನ್ನು ಹಾಕಿದ್ದು, 3029 ವಾಹನವನ್ನು ಪೊಲೀಸರು ಸೀಜ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *