ಲಾಕ್‍ಡೌನ್ ಎಫೆಕ್ಟ್ ಶಿವಗಂಗೆ ಬೆಟ್ಟದಲ್ಲಿ ಹಸಿವಿನಿಂದ ಮಂಗಗಳ ಪರದಾಟ- ಸ್ಥಳೀಯರ ನೆರವು

ಬೆಂಗಳೂರು: ಮಾರಣಾಂತಿಕ ಕೋವಿಡ್ ನಿಂದಾಗಿ ರಾಜ್ಯಾದ್ಯಂತ ಲಾಕ್‍ಡೌನ್ ವೀಧಿಸಲಾಗಿದ್ದು, ಪ್ರವಾಸಿ ತಾಣಗಳನ್ನು ಸಹ ಬಂದ್ ಮಾಡಲಾಗಿದೆ. ಹೀಗಾಗಿ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಮಂಗಗಳಿಗೆ ಆಹಾರ ಇಲ್ಲದಂತಾಗಿದ್ದು, ಹಸಿವಿಂದ ಪರದಾಡುತ್ತಿವೆ. ಸ್ಥಳೀಯರೇ ಮಂಗಗಳಿಗೆ ಆಹರ ನೀಡುವ ಮೂಲಕ ನೆರವಾಗಿದ್ದಾರೆ.

ನಗರದ ಹೊರವಲಯದ ನೆಲಮಂಗಲ ತಾಲೂಕಿನ ಶ್ರೀ ಕ್ಷೇತ್ರ ದಕ್ಷಿಣಕಾಶಿ ಶಿವಗಂಗೆಯಲ್ಲಿ ಮಂಗಗಳಿಗೆ ಆಹಾರವಿಲ್ಲದೆ ಪರದಾಡುತ್ತಿವೆ. ಇದನ್ನು ಗಮನಿಸಿದ ಸ್ಥಳೀಯರು, ಮೂಕ ವೇದನೆ ಪಡುತ್ತಿದ್ದ ಪ್ರಾಣಿ ವರ್ಗಕ್ಕೆ ಆಹಾರ ನೀಡಿದ್ದಾರೆ. ಈ ಮೂಲಕ ಮಂಗಗಳ ಹೊಟ್ಟೆಯನ್ನು ತುಂಬಿಸುತ್ತಿದ್ದಾರೆ.

ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಿದ್ದರಿಂದ ಆಹಾರ ಸಿಗುತ್ತಿತ್ತು. ಆದರೆ ಲಾಕ್‍ಡೌನ್ ನಿಂದ ಶಿವಗಂಗೆಗೆ ಯಾರೂ ಆಗಮಿಸುತ್ತಿಲ್ಲ. ಈ ಹಿನ್ನಲೆ ಶಿವಗಂಗೆ ಬೆಟ್ಟದಲ್ಲಿ ಸಾವಿರಾರು ಕೋತಿಗಳಿಗೆ ಆಹಾರವಿಲ್ಲದಂತಾಗಿದೆ. ಹೀಗಾಗಿ ಸ್ಥಳೀಯರೇ ಆಹಾರ ವ್ಯವಸ್ಥೆ ಮಾಡುತ್ತಿದ್ದಾರೆ. ಶಿವಗಂಗೆ ಗ್ರಾಮಸ್ಥರು, ಸ್ವಯಂ ಸೇವಾ ಸಂಸ್ಥೆ ನೆರವಿನಿಂದ ಮಂಗಗಳಿಗೆ ನೆರವಾಗಿದ್ದಾರೆ. ಹಲಸಿನ ಹಣ್ಣು, ಮಾವಿನ ಹಣ್ಣು, ಬಾಳೆ ಹಣ್ಣು, ಇನ್ನೀತರ ಆಹಾರ ನೀಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *