ಲವ್ ಲೆಟರ್ ಬರೆಯುವುದಕ್ಕೆ ಬಂಡಲ್ ಶೀಟ್ ಬೇಕೆಂದ ಬಾಯ್ಸ್!

ಬಿಗ್‍ಬಾಸ್ ಮನೆಯಲ್ಲಿ ಈ ವಾರ ಬಾಯ್ಸ್ ಹಾಸ್ಟೆಲ್ ಹಾಗೂ ಗಲ್ರ್ಸ್ ಹಾಸ್ಟೆಲ್ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ನಂತರ ಬಾಯ್ಸ್ ಹಾಸ್ಟೆಲ್ ಹುಡುಗರು ಗರ್ಲ್ಸ್ ಹಾಸ್ಟೆಲ್ ಹುಡುಗಿಯರಿಗೆ ಪತ್ರ ಬರೆದು ನೀಡಬೇಕು. ಹಾಗೆಯೇ ಹುಡುಗಿಯರು ಅದನ್ನು ಸಂಗ್ರಹಿಸಿಟ್ಟಿಕೊಳ್ಳಬೇಕು. ಕೊನೆಯಲ್ಲಿ ಅತೀ ಹೆಚ್ಚು ಪತ್ರಗಳನ್ನು ಬರೆದ ಹುಡುಗ, ಅತೀ ಹೆಚ್ಚು ಪತ್ರಗಳನ್ನು ಸಂಗ್ರಹಿಸಿಟ್ಟಿಕೊಂಡ ಹುಡುಗಿ ಹಾಗೂ ಅತೀ ಹೆಚ್ಚು ಪತ್ರಗಳನ್ನು ವಶಪಡಿಸಿಕೊಂಡ ವಾರ್ಡನ್ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೆ ಎಂದು ಬಿಗ್‍ಬಾಸ್ ಸೂಚಿಸಿದ್ದರು.

ಅದರಂತೆ ಬಾಯ್ಸ್ ಹಾಸ್ಟೆಲ್‍ನ ಹುಡುಗರು ಗರ್ಲ್ಸ್ ಹಾಸ್ಟೆಲ್ ಹುಡುಗಿಯರಿಗೆ ಪತ್ರಗಳನ್ನು ಬರೆದಿದ್ದರು. ಆ ಪತ್ರಗಳನ್ನು ಹುಡುಗಿಯರು ಓದಿ ಬಚ್ಚಿಟ್ಟಿದ್ದರು. ಆದರೆ ಅದೇಗೋ ವಾರ್ಡನ್ ಆಗಿರುವ ನಿಧಿ ಸುಬ್ಬಯ್ಯ ಪತ್ರಗಳನ್ನೆಲ್ಲಾ ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ. ಇದೀಗ ಪತ್ರ ಬರೆಯಲು ಶೀಟ್‍ಗಳಿಲ್ಲದೆ ಬಾಯ್ಸ್ ಪರದಾಡುತ್ತಿದ್ದಾರೆ.

ಹೀಗಾಗಿ ನಿನ್ನೆ ಕ್ಯಾಮೆರಾ ಮುಂದೆ ಬಾಯ್ಸ್ ಹಾಸ್ಟೆಲ್ ಹುಡುಗರು, ನಮಸ್ತೆ ಬಿಗ್‍ಬಾಸ್, ನಮಗೆ ಏ ಫೋರ್ ಶೀಟ್ ಒಂದೊಂದು ಬಂಡಲ್‍ಬೇಕು. ನಾವು ಲವ್ ಲೆಟರ್ ಬರೆಯಬೇಕು. ಎಲ್ಲ ಲವ್ ಲೆಟರ್ ನಿಧಿ ಸುಬ್ಬಯ್ಯ ಸೀಜ್ ಮಾಡಿದ್ದಾರೆ. ನಾವೆಲ್ಲಾ 3 ದಿನಗಳಿಂದ ಕವಿಗಳಾಗಿ ಬಿಟ್ಟಿದ್ದೇವೆ. ನಮ್ಮೆಲ್ಲರಿಗೂ ಒಂದೊಂದು ಬಂಡಲ್ ಶೀಟ್ ಬೇಕು. ಬಹುಶಃ ಫಿನಾಲೆ ಆಗುವವರೆಗೂ ಲವ್ ಲೆಟರ್ ಕಂಟಿನ್ಯೂ ಆಗುತ್ತಲೇ ಇರಬೇಕು ಬಿಗ್‍ಬಾಸ್. ದಯವಿಟ್ಟು ಇವತ್ತಿಗೆ ಹತ್ತು-ಹತ್ತು ಲೆಟರ್ ಆದರೂ ಕಳುಹಿಸಿಕೊಡಿ. ನಾವು ವಾರ್ಡನ್‍ಗಳ ರಕ್ತ ಕುಡಿಬೇಕು. ಹಾಗೆ ನಮಗೆ ಕಣ್ಣಿನಲ್ಲಿ ರಕ್ತ ಬರಿಸಿದ್ದಾರೆ. ನಮ್ಮ ಪ್ರೇಮ ಪ್ರವಾಹಕ್ಕೆ ಸಪೋರ್ಟ್ ಮಾಡಿ ಬಿಗ್‍ಬಾಸ್. ಒಂದು ಬಾರಿ ಅವರ ಹತ್ತಿರ ಇರುವ  ಲೆಟರ್‌ಗಳನ್ನು ಕಿತ್ತುಕೊಳ್ಳಬಹುದು ಎಂದು ನೀವು ಹೇಳಿದರೆ ಮೂರು ನಿಮಿಷಕ್ಕೆ ಮ್ಯಾಜಿಕ್ ಆಗುತ್ತದೆ ಎಂದು ಹಾಸ್ಯ ಮಾಡುತ್ತಾರೆ.

ಈ ವೇಳೆ ನಿಧಿ ಅಡ್ಡ ಬಂದು ಕ್ಯಾಮೆರಾ ಮುಂದೆ ಬಿಗ್‍ಬಾಸ್ ಇವರೆಲ್ಲಾ ಫುಲ್ ಉರಿದುಕೊಂಡು ಬಿಟ್ಟಿದ್ದಾರೆ ಎನ್ನುತ್ತಾರೆ. ಆಗ ಎಲ್ಲರೂ ಉದಾಹರಣೆಗೆ ನಿಧಿ ಸುಬ್ಬಯ್ಯರವರೇ ಉರಿದುಕೊಂಡಿದ್ದಾರೆ ನೋಡಿ ಬಿಗ್‍ಬಾಸ್ ಎಂದು ಹೇಳುತ್ತಾರೆ.

Comments

Leave a Reply

Your email address will not be published. Required fields are marked *