ರೌಡಿಶೀಟರ್ ಬಳ್ಳಾರಿ ಶಿವನ ದರ್ಬಾರ್ – ಪೆರೋಲ್ ಬಂದವನ ಸ್ವಾಗತಕ್ಕೆ 20 ಕಾರುಗಳು!

– ಹುಟ್ಟೂರು ಕನಕಪುರದಲ್ಲಿ ಭರ್ಜರಿ ಬಾಡೂಟ

ಬೆಂಗಳೂರು: ಪೆರೋಲ್ ಮೇಲೆ ಬಂದ ರೌಡಿಯೊಬ್ಬನ ಅದ್ಧೂರಿ ವೈಭೋಗದ ಸ್ಟೋರಿ ಇದಾಗಿದೆ. ಸಿಎಂ, ಪಿಎಂಗೂ ಅಷ್ಟು ಬೆಂಗಾವಲು ವಾಹನ ಇರೋದಿಲ್ಲ. ಆದರೆ ರೌಡಿ ಶೀಟರ್ ಬಳ್ಳಾರಿ ಶಿವನಿಗೆ ಮಾತ್ರ ಅದ್ಧೂರಿ ಸ್ವಾಗತ ಕೋರಲಾಗಿದೆ.

ಹೌದು. ಟ್ಯಾಬ್ ರಘು, ಸ್ಟ್ಯಾಂಡ್ ಕುಟ್ಟಿ ಮರ್ಡರ್ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ಬಳ್ಳಾರಿ ಶಿವನ ಮೇಲಿವೆ. ತಲಘಟ್ಟಪುರ, ಜೆಪಿನಗರ ಹಾಗೂ ಹನುಮಂತನಗರದಲ್ಲಿ ರೌಡಿ ಶೀಟರ್ ಆಗಿರುವ ಬಳ್ಳಾರಿ ಶಿವ, ಕೊಲೆ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷದಿಂದ ಜೈಲಿನಲ್ಲಿದ್ದಾನೆ.

ಕಳೆದ ವಾರ ಪೆರೋಲ್ ಮೇಲೆ ಬಳ್ಳಾರಿ ಶಿವ ಜೈಲಿನಿಂದ ಹೊರ ಬಂದಿದ್ದ. ಈ ವೇಳೆ ಹುಟ್ಟೂರು ಕನಕಪುರದ ಹಳ್ಳಿಯಲ್ಲಿ ಬಾಡೂಟ ಹಾಕಿಸಿದ್ದ. ಬಳ್ಳಾರಿ ಶಿವನ ಕಾರಿನ ಹಿಂದೆ 20ಕ್ಕೂ ಹೆಚ್ಚು ಕಾರುಗಳಲ್ಲಿ ಬೆಂಬಲಿಗರು ಫಾಲೋ ಮಾಡಿದರು. ಈ ಮೂಲಕ ಬಳ್ಳಾರಿ ಶಿವನ ಹಿಂದೆ ಬೆಂಬಲಿಗರ ದಂಡೇ ಹರಿದು ಬಂತು.

ಬಳ್ಳಾರಿ ಶಿವನ ವೈಭೋಗ ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಇತ್ತೀಚೆಗೆ ರೌಡಿ ಆಟೋ ರಾಮನ ವೈಭೋಗ ಕಂಡು ಜನ ಬೆರಗಾಗಿದ್ದರು. ಸದ್ಯ ಸದ್ಯ ಪೆರೋಲ್ ಮುಗಿಸಿರುವ ಬಳ್ಳಾರಿ ಶಿವ ಮತ್ತೆ ಜೈಲು ಸೇರಿದ್ದಾನೆ.

Comments

Leave a Reply

Your email address will not be published. Required fields are marked *